ಚೆಫ್ಸ್ ದಿ ಕ್ಯೂಸಿನ್ ನಲ್ಲಿ ನ.01 ರಂದು ರಾಜ್ಯೋತ್ಸವದ ಪ್ರಯುಕ್ತ ‘’ಆಹಾರೋತ್ಸವ’’ ಮೈಸೂರು,ಅಕ್ಟೋಬರ್,29,2020(..): ನಗರದ ಟಿ.ಕೆ ಬಡಾವಣೆಯ ಗಣೇಶ ಭಂಡಾರ್ ಬಳಿ ಇರುವ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಿಂದ ನವೆಂಬರ್ 01 ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಳಗ್ಗೆ 7 ರಿಂದ ರಾತ್ರಿ 10 ಗಂಟೆಯವರೆಗೆ ಆಹಾರೋತ್ಸವ ಆಯೋಜಿಸಲಾಗಿದೆ. ಅಂದು ಹೋಟೆಲ್ ನಲ್ಲಿ ನಾನಾ ರೀತಿಯ ಆಹಾರ ಪದಾರ್ಥ ತಿಂಡಿ ತಿನಿಸುಗಳು ಲಭ್ಯವಿರಲಿವೆ. ಗ್ರಾಹಕರು ಹೋಟೆಲ್ ಗೆ ಆಗಮಿಸಿ ತಮಗೆ ಇಷ್ಟವಾದ ಆಹಾರ ಸವಿಯಬಹುದು. ಅಂದಿನ ಮೆನು ಇಲ್ಲಿದೆ ನೋಡಿ…. ಕೊಟ್ಟೆ ಇಡ್ಲಿ, ಮಂಗಳೂರು ಶೈಲಿಯ ಗೋಲಿ ಬಜ್ಜಿ, ಅಪ್ಪಂ-ಕಡ್ಲೆಗಸಿ ವಿವಿಧ ರೀತಿಯ ರೈಸ್ ಬಾತ್, ಪಿಜ್ಜಾ ದೋಸಾ, ನೀರ್ ದೋಸಾ, ಟೊಮೊಟಾ ದೋಸಾ, ದಾವಣಗೆರೆ ಬೆಣ್ಣೆ ದೋಸೆ, ರಾಗಿ ಮುದ್ದೆ, ಸೊಪ್ಪಿನ ಸಾರು ಊಟ (ಮಧ್ಯಾಹ್ನ), ಮೈಸೂರು ಮಸಾಲಾ ದೋಸಾ, ಅಕ್ಕಿರೊಟ್ಟಿ-ಎಣ್ಣೆಗಾಯಿ, ಟೊಮೊಟೊ ಬಾತ್, ಇಡ್ಲಿ, ರವದೋಸೆ, ತುಪ್ಪದ ದೋಸೆ , ಗೋಧಿ ದೋಸೆ, ಹೆಸರುಕಾಳು ದೋಸೆ, ಬಿಸಿಬೆಳೆ ಬಾತ್, ಹಾಗೂ ಇನ್ನೀತರೆ ತಿನಿಸುಗಳು ಲಭ್ಯವಿರುತ್ತವೆ. ಸಂಪರ್ಕ ಸಂಖ್ಯೆ : 7411883230, 9448601060, 08214190086 :--- .01----