ಐಎಂಎ ಬಹುಕೋಟಿ ವಂಚನೆ ಪ್ರಕರಣ; ಪ್ರಮುಖ ಆರೋಪಿ ಮನ್ಸೂರ್ ಖಾನ್ ಗೆ ಜಾಮೀನು ಮಂಜೂರು.. ಬೆಂಗಳೂರು,ಅಕ್ಟೋಬರ್,28,2020(..):ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮನ್ಸೂರ್ ಖಾನ್ ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಇಡಿ ದಾಖಲಿಸಿದ್ಧ ಪ್ರಕರಣದಲ್ಲಿ ಒಂದುವರೆ ವರ್ಷದ ಬಳಿಕ ಪ್ರಮುಖ ಆರೋಪಿ ಮನ್ಸೂರ್ ಖಾನ್ ಗೆ ಜಾಮೀನು ಸಿಕ್ಕಿದ್ದು ಜಾಮೀನು ಪಡೆಯಲು 5 ಲಕ್ಷ ಮೌಲ್ಯದ ಬಾಂಡ್, ಇಬ್ಬರು ಶ್ಯೂರಿಟಿಗೆ ಹೈಕೋರ್ಟ್ ಸೂಚನೆ ನೀಡಿದೆ. ಜೊತೆಗೆ ತನಿಖೆಗೆ ಸಹಕರಿಸಬೇಕು. ಸಾಕ್ಷ್ಯ ನಾಶಪಡಿಸದಂತೆ ಕೋರ್ಟ್ ಸೂಚನೆ ನೀಡಿದೆ. ಆರೋಪಿ ಮನ್ಸೂರ್ ಖಾನ್ ಗೆ ಇಡಿ ಪ್ರಕರಣದಲ್ಲಿ ಜಾಮೀನು ಸಿಕ್ಕಿದರೂ ಬಿಡಗಡೆ ಭಾಗ್ಯವಿಲ್ಲ. ಹೌದು, ಸಿಬಿಐ ಕೇಸ್ ಬಾಕಿ ಇದ್ದು ಈ ಹಿನ್ನೆಲೆ ಮನ್ಸೂರ್ ಖಾನ್ ಗೆ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲ. ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಿಬಿಐ ದಾಖಲಿಸಲಾಗಿರುವಂತಹ ಪ್ರಕರಣದಲ್ಲಿ ಜಾಮೀನು ದೊರೆತಿಲ್ಲ. : – -- - - - -