ಶಿರಾದಲ್ಲಿ ಹುಲಿಯಾ ಮತ್ತಿತರ ಕಾಡುಪ್ರಾಣಿಗಳ ಕಾಟ ಶುರುವಾಗಿದೆ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕೆ ಮೈಸೂರು,ಅಕ್ಟೋಬರ್,29,2020(..): ಶಿರಾದಲ್ಲಿ ಹುಲಿಯಾ ಮತ್ತಿತರ ಕಾಡುಪ್ರಾಣಿಗಳ ಕಾಟ ಶುರುವಾಗಿದೆ. ಇಲ್ಲಿ ಬಂಡೆಯ ಸಮಸ್ಯೆ ಇದೆಯೆಂದು ಸ್ಥಳೀಯರು ಪ್ರಸ್ತಾಪ ಮಾಡಿದ್ದಾರೆ. ಬಂಡೆಯಂತ ಸಮಸ್ಯೆ ಪರಿಹಾರ ಮಾಡುವಂತಹ ನಾಯಕ ಯಡಿಯೂರಪ್ಪ ಇದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ. ಮಹಾಭಾರತದ ಧರ್ಮ ಯುದ್ಧದಲ್ಲಿ ಗೆದ್ದದ್ದು ಪಾಂಡವರು. ಶಿರಾ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಬಂಡೆಯ ಸಮಸ್ಯೆಯನ್ನು ನಾವು ಪರಿಹಾರ ಮಾಡುತ್ತೇವೆ. ಶಿರಾ ಕ್ಷೇತ್ರದ ಜನತೆ ಕನಕಪುರದ ಬಂಡೆಯನ್ನು ಒಡೆಯಬೇಕು ಎಂದು ತಿಳಿಸಿದ್ದಾರೆ. : ------ - -