ಇಂದು ಸಂಜೆ ‘ಪ್ರೊ.ಶಿವರಾಮ ಕಾಡನಕುಪ್ಪೆ ಒಂದು ನೆನಪು’ ಕಾರ್ಯಕ್ರಮ ಮೈಸೂರು,ಅಕ್ಟೋಬರ್,28,2020(..): ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಮೈಸೂರು ಜಿಲ್ಲಾ ಘಟಕ ಮತ್ತು ಸ್ಪಂದನ ಸಾಂಸ್ಕೃತಿಕ ಪರಿಷತ್ತು ವತಿಯಿಂದ ಸಾಹಿತಿ, ಹೋರಾಟಗಾರ, ವಿಮರ್ಶಕ, ಚಿಂತಕ ಪ್ರೊ.ಶಿವರಾಮಕಾಡನಕುಪ್ಪೆ ಒಂದು ನೆನಪು ಕಾರ್ಯಕ್ರಮವನ್ನು ಕಲಾಮಂದಿರದ ಆವರಣದಲ್ಲಿರುವ ಚಿಂತಕರ ಚಾವಡಿಯಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಉದ್ಘಾಟನೆ ಮಾಡಲಿದ್ದು, ಮಹಾಜನ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಬಿ.ಆರ್.ಜಯಕುಮಾರಿ ಅಧ್ಯಕ್ಷತೆವಹಿಸಲಿದ್ದಾರೆ. ಕಾಡನಕುಪ್ಪೆ ನೆನಪು ಕುರಿತು ಸಾಹಿತಿ ಡಾ.ಎಸ್.ತುಕರಾಂ, ಹಿರಿಯ ಲೇಖಕ ಡಿ.ಹೊಸಹಳ್ಳಿ ಶಿವು ಮಾತನಾಡಲಿದ್ದಾರೆ. : . ---4 -