ಐಪಿಎಲ್’ನಂದು ಡೆಲ್ಲಿ-ಹೈದರಾಬಾದ್ ಗೆಲುವಿಗಾಗಿ ಹೋರಾಟ ಬೆಂಗಳೂರು, ಅಕ್ಟೋಬರ್ 27, 2020 (..):ಐಪಿಎಲ್ ನಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಪರಸ್ಪರ ಗೆಲುವಿಗಾಗಿ ಹೋರಾಡಲಿವೆ. ಇಂದಿನ ಪಂದ್ಯದಲ್ಲಿ ಸಾಕಷ್ಟು ಪೈಪೋಟಿ ನಿರೀಕ್ಷಿಸಲಾಗಿದೆ. ಸದ್ಯ ಅಂಕಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿರುವ ಡೆಲ್ಲಿ ಅಗ್ರ ಸ್ಥಾನಕ್ಕೇರಲು ಹವಣಿಸುತ್ತಿದೆ. ಇನ್ನು ಸನ್‌ರೈಸರ್ಸ್‌ಗೆ ಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊಳ್ಳಲು ಈ ಪಂದ್ಯದಲ್ಲಿ ಜಯಗಳಿಸಲೇ ಬೇಕಾದ ಅನಿವಾರ್ಯತೆಯಲ್ಲಿದೆ. ಉಭಯ ತಂಡಗಳು ಈವರೆಗೆ 16 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು , 10 ರಲ್ಲಿ ಹೈದ್ರಾಬಾದ್ , 6 ರಲ್ಲಿ ಡೆಲ್ಲಿ ಜಯ ಸಾಧಿಸಿದೆ. ಸಮಯ : 7.30 ಕ್ಕೆ