ರವೀನಾ ಬರ್ತ್ ಡೇಗೆ ರಮಿಕಾ ಸೇನ್ ಫಸ್ಟ್ ಲುಕ್ ರಿಲೀಸ್ ಬೆಂಗಳೂರು, ಅಕ್ಟೋಬರ್ 27, 2020 (..):ರಮಿಕಾ ಸೇನ್ ಲುಕ್ ನ್ನು ಕೆಜಿಎಫ್ 2 ತಂಡ ಅನಾವರಣಗೊಳಿಸಿದೆ. ರವೀನಾ ಕೆಜಿಎಫ್ 2 ನಲ್ಲಿ ರಮಿಕಾ ಸೇನ್ ಪಾತ್ರ ಮಾಡುತ್ತಿದ್ದಾರೆ. ಅವರ ಬರ್ತ್ ಡೇ ದಿನದಂದು ಫಸ್ಟ್ ಲುಕ್ ರಿಲೀಸ್ ಮಾಡಿ ಗಿಫ್ಟ್ ಕೊಟ್ಟಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಮೊನ್ನೆಯಷ್ಟೇ ನಾಯಕಿ ಶ್ರೀನಿಧಿ ಶೆಟ್ಟಿ ಬರ್ತ್ ಡೇಗೆ ಕೆಜಿಎಫ್ 2 ತಂಡ ಶ್ರೀನಿಧಿ ಲುಕ್ ಅನಾವರಣಗೊಳಿಸಿತ್ತು.ಬಾಲಿವುಡ್ ನಟಿ ರವೀನಾ ಟಂಡನ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ರವೀನಾ ಸದ್ಯಕ್ಕೆ ಕನ್ನಡದ ಕೆಜಿಎಫ್ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.