ಕೊರೊನಾ ಸಂಕಷ್ಟ ಕಳೆದರೆ ಮುಂದಿನ ವರ್ಷ ವಿಜೃಂಭಣೆ ದಸರಾ : ಸಿಎಂ ಬಿ.ಎಸ್.ಯಡಿಯೂರಪ್ಪ ಮೈಸೂರು,ಅಕ್ಟೋಬರ್,26,2020(..): ತಾಯಿ ಚಾಮುಂಡೇಶ್ವರಿ ದಯೆಯಿಂದ ಕೊರೊನಾ ಸಂಕಷ್ಟ ಕಳೆದರೆ ಮುಂದಿನ ವರ್ಷ ವಿಜೃಂಭಣೆಯಿಂದ ದಸರಾ ಆಚರಿಸಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ನಾಡಹಬ್ಬ ದಸರಾ ಮಹೋತ್ಸವ ಜಂಬೂಸವಾರಿಗೆ ಚಾಲನೆ ನೀಡಲು ಮೈಸೂರಿಗೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ನಾಡಿನ ಎಲ್ಲ ಜನರಿಗೆ ವಿಜಯದಶಮಿಯ ಶುಭಾಶಯ ಕೋರಿದರು. ಎಲ್ಲ ಸಂಕಷ್ಟದಿಂದ ಪಾರಾಗಿ ನೆಮ್ಮದಿಯಿಂದ ಬದುಕುವ ಕಾಲ ತಾಯಿ ಚಾಮುಂಡೇಶ್ವರಿ ನೀಡಲಿ ಈ ಬಾರಿ ಕೊರೊನಾ ಹಿನ್ನೆಲೆ ದಸರಾ ಜಂಬೂಸವಾರಿ ಸರಳವಾಗಿ ಮಾಡಲಾಗುತ್ತಿದೆ. ತಾಯಿ ಚಾಮುಂಡೇಶ್ವರಿ ದಯೆಯಿಂದ ಈ ಕೊರೊನಾ ಸಂಕಷ್ಟ ಕಳೆದು, ಮುಂದಿನ ವರ್ಷ ವಿಜೃಂಭಣೆಯಿಂದ ದಸರಾ ಆಚರಿಸುವ ಹಾಗೂ ಎಲ್ಲ ಸಂಕಷ್ಟದಿಂದ ಪಾರಾಗಿ ನೆಮ್ಮದಿಯಿಂದ ಬದುಕುವ ಕಾಲ ತಾಯಿ ಚಾಮುಂಡೇಶ್ವರಿ ನೀಡಲಿ ಎಂದು ಪ್ರಾರ್ಥಿಸಿದರು. : ------ ..