ಮೈಸೂರು ದಸರಾ: ಯದುವೀರ್ ರಿಂದ ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಕೆ…. ಮೈಸೂರು,ಅಕ್ಟೋಬರ್ ,26,2020(..): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಅರಮನೆಯಲ್ಲಿ ಸಾಂಪ್ರದಾಯಿಕ ಪೂಜೆ ಪುನಸ್ಕಾರ ಕಳೆಗಟ್ಟಿದ್ದು ಈ ನಡುವೆ ರಾಜವಂಶಸ್ಥ ಕೃಷ್ಣದತ್ತ ಚಾಮರಾಜ ಒಡೆಯರ್ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಯದುವಂಶದ ಸಂಪ್ರದಾಯದಂತೆ ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಅವರು ವಿಜಯಯಾತ್ರೆ ನಡೆಸಿದರು. ಮಂಗಳವಾದ್ಯ ನಾದಸ್ವರದೊಂದಿಗೆ ಅರಮನೆ ಭುವನೇಶ್ವರಿ ದೇಗುಲದ ಬಳಿ ಆಗಮಿಸಿ ಯದುವೀರ್ ಶಮಿ ಪೂಜೆ ನೆರವೇರಿಸಿದರು. ಅರಮನೆಯ ಭುವನೇಶ್ವರಿ ದೇಗುಲದಲ್ಲಿರುವ ಬನ್ನಿ ಮರಕ್ಕೆ ಯದುವೀರ್ ಪೂಜೆ ನೆರವೇರಿಸಿದ್ದು, ನಾದಸ್ವರ ಮೇಳದೊಂದಿಗೆ ಬನ್ನಿ ಪೂಜೆ ಕಳೆಗಟ್ಟಿತು. ಇನ್ನು ಭುವನೇಶ್ವರಿ ದೇಗುಲಕ್ಕೆ ಆಪ್ತರಿಗೆ ಮಾತ್ರ ಅವಕಾಶ ನೀಡಲಾಗಿತ್ತು. : - – – .