ಆಯುಧ ಪೂಜಾ : ದಸರಾ ಗಜಪಡೆ ಅಭಿಮನ್ಯು ಮತ್ತು ತಂಡಕ್ಕೆ ವಿಶೇಷ ಪೂಜೆ ಮೈಸೂರು,ಅಕ್ಟೋಬರ್,25,2020(..): ಸಾಂಸ್ಕೃತಿಕ ನಗರಿಯಲ್ಲಿ ಆಯುಧ ಪೂಜೆ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ದಸರಾ ಗಜಪಡೆ ಅಭಿಮನ್ಯು ಮತ್ತು ತಂಡಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಾನುವಾರ ಸೋಮೇಶ್ವರ ದೇವಾಲಯದ ಮುಂಭಾಗ ಅರಣ್ಯ ಇಲಾಖೆಯಿಂದ ಗಜಪಡೆಗೆ ಪೂಜಾ ಕಾರ್ಯ ನಡೆಸಲಾಯಿತು. ಸಚಿವ ಎಸ್.ಟಿ.ಸೋಮಶೇಖರ್ ದಸರಾ ಜಂಬೂ ಸವಾರಿ ನಿರ್ವಿಘ್ನವಾಗಿ ನೆರವೇರಲೆಂದು ಪ್ರಾರ್ಥನೆ ಸಲ್ಲಿಸಿದರು. ಪೂಜೆ ಬಳಿಕ ಗಜಪಡೆಗೆ ಹಣ್ಣಬೆಲ್ಲ ನೀಡಿದರು. ಗಜೆಪಡೆ ಪೂಜೆಯಲ್ಲಿ ಶಾಸಕ ಎಲ್.ನಾಗೇಂದ್ರ, ಮೂಡ ಅಧ್ಯಕ್ಷ ರಾಜೀವ್. ಡಿಸಿಎಫ್ ಅಲೆಕ್ಸಾಂಡರ್, ವೈದ್ಯ ಡಾ.ನಾಗರಾಜ್ ಇತರರು ಇದ್ದರು. : ------