ಬಂಡೀಪುರದಲ್ಲಿ ನೈಟ್ ಸಫಾರಿ ಆರೋಪ : ನಟ ಧನ್ವೀರ್ ವಿಚಾರಣೆಗೆ ಹಾಜರ್ ಮೈಸೂರು,ಅಕ್ಟೋಬರ್,24,2020(..): ಬಂಡೀಪುರದಲ್ಲಿ ನೈಟ್ ಸಫಾರಿ ಆರೋಪ ಹಿನ್ನಲೆ ನಟ ಧನ್ವೀರ್ ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ಬಂಡೀಪುರದ ಮೇಲುಕಾಮನಹಳ್ಳಿಯ ಆರ್ ಎಫ್ ಒ ಕಚೇರಿಯಲ್ಲಿ ಆರ್.ಎಫ್. ಓ ನವೀನ್ ಕುಮಾರ್ ರಿಂದ ವಿಚಾರಣೆ ನಡೆಯಲಿದೆ. ಬಂಡೀಪುರ ಸಿ.ಎಫ್ ಬಾಲಚಂದ್ರ ಅವರಿಗೆ ವಿಚಾರಣ ವರದಿ ಮೊಬೈಲ್ ನಲ್ಲಿ ವೀಡಿಯೋ ಚಿತ್ರಕರಣದ ಸಮಯ ಪರಿಶೀಲನೆ, ಕಾನೂನು ಉಲ್ಲಂಘನೆ ಮಾಡಿದ್ದಾರ ಅಥವಾ ಇಲ್ಲವಾ ಎಂದು ವಿಚಾರಣೆ ನಡೆಸಿ ಬಂಡೀಪುರ ಸಿ.ಎಫ್ ಬಾಲಚಂದ್ರ ಅವರಿಗೆ ವರದಿ ನೀಡಲಿದ್ದಾರೆ. ಅತಿಕ್ರಮವಾಗಿ ಅರಣ್ಯ ಪ್ರವೇಶ ಮಾಡಿಲ್ಲವೆಂದು ಸ್ಪಷ್ಟನೆ ಸಫಾರಿ ವೇಳೆಯಲ್ಲೇ ಹುಲಿ ಚಿತ್ರ ಸೆರೆ ಹಿಡಿದಿದ್ದೇನೆ. ಅತಿಕ್ರಮವಾಗಿ ಅರಣ್ಯ ಪ್ರವೇಶ ಮಾಡಿಲ್ಲವೆಂದು ಸ್ಪಷ್ಟನೆ ನೀಡಿದ ನಟ ಧನ್ವೀರ್. ನಿಗದಿತಿ ಸಫಾರಿ ಸಮಯ ಒಳಗೆ ಅರಣ್ಯದಿಂದ ಹೊರಬಂದಿರವ ಬಗ್ಗೆ ಸಾಕ್ಷ್ಯ ನೀಡಿದ್ದಾರೆ ಎಂದು ತಿಳಿದು ಬಂದಿದೆ. : ---- --