ಗೂಂಡಾಗಿರಿ ಮೂಲಕ ಆರ್.ಆರ್ ನಗರ ಗೆಲ್ಲಲು ಡಿಕೆಶಿ ಯತ್ನ- ಸಂಸದೆ ಶೋಭಾ ಕರಂದ್ಲಾಜೆ ಆರೋಪ… ಮೈಸೂರು,ಅಕ್ಟೋಬರ್,24,2020(..):ಆರ್.ಆರ್ ನಗರ ಉಪಚುನಾವಣಾ ಕಣ ರಂಗೇರಿದ್ದು ಮೂರು ಪಕ್ಷದ ನಾಯಕರು ತಮ್ಮ ಅಭ್ಯರ್ಥಿ ಪರ ಪ್ರಚಾರಕ್ಕಿಳಿದಿದ್ದಾರೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆಶಿವಕುಮಾರ್ ಗೂಂಡಾಗಿರಿ ಮೂಲಕ ಆರ್.ಆರ್ ನಗರ ಉಪಚುನಾವಣೆ ಗೆಲ್ಲಲು ಮುಂದಾಗಿದ್ದಾರೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ಶೋಭಾ ಕರಂದ್ಲಾಜೆ, ಡಿ.ಕೆ ಶಿವಕುಮಾರ್ ಗೂಂಡಾ ರಾಜಕಾರಣಿ. ಗೂಂಡಾಗಿರಿ ಮೂಲಕ ಆರ್.ಆರ್ ನಗರ ಗೆಲ್ಲಲು ಡಿಕೆ ಶಿವಕುಮಾರ್ ಯತ್ನಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಡಿಸಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಹೇಳಿದರು. ಚುನಾವಣೆ ಪಾರದರ್ಶಕವಾಗಿ ನಡೆಯಬೇಕು. ಯಾವುದೇ ಅಕ್ರಮ ನಡೆಯಲು ಅವಕಾಶ ನೀಡಬಾರದು ಎಂದು ಶೋಭಾಕರಂದ್ಲಾಜೆ ಮನವಿ ಮಾಡಿದರು. : - – - — ---