ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿ : 16 ಸಾವಿರ ಲೀಟರ್ ಡೀಸೆಲ್ ಮಣ್ಣುಪಾಲು ಹಾಸನ, ಅಕ್ಟೋಬರ್,23,2020(..) : ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಟ್ಯಾಂಕರ್ ಪಲ್ಟಿಯಾಗಿ 16 ಸಾವಿರ ಲೀಟರ್ ಡೀಸೆಲ್ ಮಣ್ಣುಪಾಲಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಡೀಸೆಲ್ ಟ್ಯಾಂಕರ್ ಹದಗೆಟ್ಟ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಇನ್ನು ಅವಘಡದಿಂದ ಲಾರಿ ಟ್ಯಾಂಕರ್ ನ ಕ್ಯಾಪ್ ಓಪನ್ ಆಗಿ ಡೀಸೆಲ್ ರಸ್ತೆಗೆ ಸುರಿದೆದೆ. ಹಾಗಾಗಿ, ವಾಹನದ ಹತ್ತಿರ ಜನರು ಸುಳಿಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. : -- -16 ---