‘ಕರ್ನಾಟಕ ಪತ್ರಕರ್ತ’ ನೆನಪಿನ ಸಂಚಿಕೆ ಲೋಕಾರ್ಪಣೆ ಮಾಡಿದ ಸಿಎಂ ಬಿಎಸ್ ಯಡಿಯೂರಪ್ಪ… ಮಂಗಳೂರು,ಅಕ್ಟೋಬರ್,23,2020(..):ಮಂಗಳೂರಿನಲ್ಲಿ ನಡೆದ ಪತ್ರಕರ್ತರ 35ನೇ ರಾಜ್ಯ ಸಮ್ಮೇಳನ ಸವಿನೆನಪಿಗಾಗಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಹೊರ ತಂದಿರುವ ‘ಕರ್ನಾಟಕ ಪತ್ರಕರ್ತ’ ನೆನಪಿನ ಸಂಚಿಕೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಡುಗಡೆ ಮಾಡಿದರು. ಕರ್ನಾಟಕ ಪತ್ರಕರ್ತ ನೆನಪಿನ ಸಂಚಿಕೆ ಬಿಡುಗಡೆ ವೇಳೆ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಹಾಜರಿದ್ದರು. ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ, ನಾಗೇಶ್ ಹೆಗಡೆ, ಈಶ್ವರ ದೈ ತೋಟ, ಡಾ.ವಸಂತ ಕುಮಾರ ಪೆರ್ಲ, ಡಾ.ಶಿವಕುಮಾರ ಕಣಸೋಗಿ, ಡಾ.ಪೂರ್ಣಾನಂದ, ಡಾ.ಸೌಮ್ಯ, ಡಾ.ಶ್ರೀನಿವಾಸ ಸಿರನೂರಕರ್, ಅಂಶಿ ಪ್ರಸನ್ನ ಕುಮಾರ್, ಹರತೀಸುತ, ಡಾ.ಚೆಂದುನವರ, ಟಿ.ಎನ್.ಗುರುಪ್ರಸಾದ್ ಸೇರಿದಂತೆ ಹಲವರು ಲೇಖನ ಬರೆದು ಸಂಚಿಕೆ ಸಂಪನ್ನಗೊಳಿಸಿದ್ದಾರೆ. : -- - –-