ಜಂಬೂಸವಾರಿಯಲ್ಲಿ ಎರಡು ಸ್ತಬ್ಧಚಿತ್ರಗಳಿಗೆ ಮಾತ್ರ ಅವಕಾಶ ಮೈಸೂರು,ಅಕ್ಟೋಬರ್,23,2020(..): ಕೊರೊನಾದಿಂದಾಗಿ ಸರಳ ದಸರಾ ನಡೆಸುತ್ತಿದ್ದು, ಈ ಬಾರಿ ದಸರಾ ಜಂಬೂಸವಾರಿಯಲ್ಲಿ ಕೇವಲ ಎರಡು ಸ್ತಬ್ಧಚಿತ್ರಗಳನ್ನು ಬಳಸಲಾಗುತ್ತಿದೆ.ಸ್ತಬ್ಧಚಿತ್ರಗಳ ಸಿದ್ಧತೆಯು ವಸ್ತುಪ್ರದರ್ಶನ ಆವರಣದಲ್ಲಿ ನಡೆಯುತ್ತಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮೈಸೂರು ಅರಮನೆಯ ವೈಭವ ತೋರಿಸುವ ಸ್ತಬ್ಧಚಿತ್ರ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಕೋವಿಡ್‌-19ಗೆ ಸಂಬಂಧಿಸಿದ ಸ್ತಬ್ಧಚಿತ್ರ ಸಿದ್ಧಪಡಿಸಲಾಗುತ್ತಿದೆ. ಕೋವಿಡ್‌ ವಾರಿಯರ್‌ಗಳ ಸಾಧನೆಯನ್ನು ಪ್ರತಿಬಿಂಬಿಸಲಾಗುತ್ತಿದೆ. ಅಲ್ಲದೇ, ಸಾರ್ವಜನಿಕರಲ್ಲಿ ಕೋವಿಡ್‌ ಸಂಬಂಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆಸಲಾಗುತ್ತಿದೆ. ಈ ಬಾರಿ ಮೆರವಣಿಗೆಯು ಅರಮನೆ ಆವರಣದಲ್ಲಿ ಕೇವಲ 300 ಮೀಟರ್‌ ಅಂತರದೊಳಗೆ ನಡೆಯಲಿದೆ. : -- --