ನಟಿ ಮೇಘನಾ ರಾಜ್ ಗೆ ಗಂಡು ಮಗು ಜನನ : ಜೂನಿಯರ್ ಚಿರು ಆಗಮನಕ್ಕೆ ಕುಟಂಬದಲ್ಲಿ ಸಂಭ್ರಮ ಬೆಂಗಳೂರು,ಅಕ್ಟೋಬರ್,22,2020(..): ನಟ ದಿ.ಚಿರಂಜೀವಿ ಸರ್ಜಾ ಪತ್ನಿ ನಟಿ ಮೇಘನಾ ರಾಜ್ ಗೆ ಗಂಡು ಮಗು ಜನನ. ಇತ್ತೀಚಿಗೆ ಚಲನಚಿತ್ರ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿದ್ದರು. ಹೀಗಾಗಿ, ಕುಟುಂಬವು ಗಂಡು ಮಗುವಿನ ನಿರೀಕ್ಷೆಯಲ್ಲಿತ್ತು. ಅದರಂತೆ ಇಂದು ಗಂಡು ಮಗು ಜನಿಸಿದ್ದು, ಇಡೀ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ಚಿರಂಜೀವಿ ಸರ್ಜಾ ಅಭಿಮಾನಿಗಳು ಗಂಡು ಮಗು ಜನನಕ್ಕೆ ಜೂನಿಯರ್ ಚಿರು ಆಗಮವಾಗಿದ್ದಾನೆ ಎಂದು ಹರ್ಷೋದ್ಘಾರಗಳ ಮೂಲಕ ಆಸ್ಪತ್ರೆಯ ಎದುರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. : --------