ಜಿಲ್ಲಾಧಿಕಾರಿ ಪ್ರೋಟೊಕಾಲ್ ಫಾಲೋ ಮಾಡುತ್ತಿಲ್ಲ-ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಮೇಯರ್ ತಸ್ನಿಂ ಗರಂ…. ಮೈಸೂರು,ಅಕ್ಟೋಬರ್,21,2020(..):ಜಿಲ್ಲಾಧಿಕಾರಿ ಪ್ರೋಟೊಕಾಲ್ ಫಾಲೋ ಮಾಡುತ್ತಿಲ್ಲ. ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಮೈಸೂರು ನಗರ ಪಾಲಿಕೆ ಮೇಯರ್ ತಸ್ನೀಂ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಇಂದು ಮಾತನಾಡಿದ ಮೇಯರ್ ತಸ್ನೀಂ, ಮೈಸೂರು ಜಿಲ್ಲಾಧಿಕಾರಿ ಪ್ರೋಟೊಕಾಲ್ ಫಾಲೋ ಮಾಡುತ್ತಿಲ್ಲ. ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಮೈಸೂರು ದಸರಾ ಉದ್ಘಾಟನೆ ಸಿಎಂಗೆ ಸ್ವಾಗತ ನೀಡುವಾಗ ಮೈಸೂರಿನ ಪ್ರಥಮ ಪ್ರಜೆಗೆ ಅವಕಾಶ ನೀಡಬೇಕು. ಆದ್ರೆ ಪೋಲೀಸರಿಗೆ ಮೇಯರ್ ಅವರನ್ನು ಒಳಗೆ ಬಿಡದಂತೆ ಹೇಳುತ್ತಾರೆ. ಉದ್ಘಾಟನೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪಕ್ಕದಲ್ಲಿ ನಮ್ಮ ಆಸನ ಇಡಬೇಕು. ಕೊನೆಯಲ್ಲಿ ನಮಗೆ ನೀಡುತ್ತೀರಿ ಎಂದು ಜಿಲ್ಲಾಧಿಕಾರಿ ವಿರುದ್ಧ ಹರಿಹಾಯ್ದರು. ಮೈಸೂರಿನ ಮೇಯರ್ ಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕು. ಸ್ವಾಗತ ಮಾಡುವಾಗ ಉಪಮಹಾಪೌರರ ಹಾಗು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಿಗೆ ಸ್ವಾಗತ ಕೋರುವುದಿಲ್ಲ‌. ಯಾರ ಮನವೊಲಿಸಲು ಈ ಕೆಲಸ ಮಾಡುತ್ತಿದ್ದೀರಿ…? ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಪ್ರಶ್ನಿಸಿದ್ದಾರೆ. : – - - - -