ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಗುಲಿ ವ್ಯಕ್ತಿ ಸಾವು… ಮೈಸೂರು,ಅಕ್ಟೋಬರ್,20,2020(..):ಟಿಂಕರಿಂಗ್ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಗುಲಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು-ಬನ್ನೂರು ರಸ್ತೆಯ ಹೊಸಹುಂಡಿ ಬಳಿ ಈ ಘಟನೆ ನಡೆದಿದೆ. ಸೈಯದ್ ಮುಕ್ತಾರ್ (48) ಮೃತಪಟ್ಟವರು. ಸೈಯದ್ ಮುಕ್ತಾರ್ ಮೈಸೂರಿನ ಕೆ.ಸಿ.ನಗರದ ನಿವಾಸಿಯಾಗಿದ್ದು, ಆಟೋ ಗ್ಯಾರೇಜ್ ಒಂದರಲ್ಲಿ ಟಿಂಕರಿಂಗ್ ಕೆಲಸ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ವೆಲ್ಡಿಂಗ್ ಕೆಲಸ ನಡೆಯುತ್ತಿದ್ದ ವೇಳೆ ವಿದ್ಯುತ್ ತಗುಲಿ ಸೈಯದ್ ಮುಕ್ತಾರ್ ಮೃತಪಟ್ಟಿದ್ದಾರೆ. ಈ ಕುರಿತು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - - - -