ಸಭೆ ನಡೆಸಿದ ಮಾತ್ರಕ್ಕೆ ಪ್ರವಾಹ ಪೀಡಿತರ ಸಂಕಷ್ಟ ನಿವಾರಣೆಯಾಗುವುದೆ? : ದಿನೇಶ್ ಗುಂಡೂರಾವ್ ಬೆಂಗಳೂರು,ಅಕ್ಟೋಬರ್,20.2020(..): ಪ್ರವಾಹದಿಂದ ಉತ್ತರ ಕರ್ನಾಟಕದ ಜನ ಕಣ್ಣೀರು ಹಾಕುತ್ತಿದ್ದಾರೆ. ಕೇವಲ ಅಧಿಕಾರಿಗಳೊಂದಿಗೆ ಸಭೆ ಮಾಡಿದ ಮಾತ್ರಕ್ಕೆ ಪ್ರವಾಹ ಪೀಡಿತರ ಸಂಕಷ್ಟ ನಿವಾರಣೆಯಾಗುವುದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಆಕ್ರೋಶವ್ಯಕ್ತಪಡಿಸಿದ್ದಾರೆ. ಗೋಳು ಕೇಳದ ಮೇಲೆ ಉಸ್ತುವಾರಿಯಾದರೂ ಇವರಿಗ್ಯಾಕೆ? ಪ್ರವಾಹ ಪೀಡಿತ ಪ್ರದೇಶಗಳಿಗೆ ಅನೇಕ ಜಿಲ್ಲೆಗಳ ಉಸ್ತುವಾರಿ ಸಚಿವರು ಭೇಟಿಯೇ ಕೊಟ್ಟಿಲ್ಲ. ಕೇವಲ ಅಧಿಕಾರಿಗಳೊಂದಿಗೆ ಸಭೆ ಮಾಡಿದ ಮಾತ್ರಕ್ಕೆ ಪ್ರವಾಹ ಪೀಡಿತರ ಸಂಕಷ್ಟ ನಿವಾರಣೆಯಾಗುವುದೇ ಎಂದು ಪ್ರಶ್ನಿಸಿದ್ದು, ಸಂತ್ರಸ್ತರ ಗೋಳು ಕೇಳದ ಮೇಲೆ ಉಸ್ತುವಾರಿಯಾದರೂ ಇವರಿಗ್ಯಾಕೆ ಎಂದು ಟ್ವಿಟರ್ ನಲ್ಲಿ ಕಿಡಿಕಾರಿದ್ದಾರೆ. : ------?-