ನಂಜನಗೂಡು-ಊಟಿ ಹೆದ್ದಾರಿ ಬಳಿ ಅಪಘಾತ: ಇಬ್ಬರು ಸಾವು ಮೈಸೂರು, ಅಕ್ಟೋಬರ್ 19, 2020 (..):ನಂಜನಗೂಡು-ಊಟಿ ಹೆದ್ದಾರಿಯ ಎಲಚಗೆರೆ ಗೇಟ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ನಂಜನಗೂಡಿನ ಕೂಡ್ಲಾಪುರ ಗ್ರಾಮದ ನಾಗರಾಜು(38), ಪುಟ್ಟಸ್ವಾಮಿ (56) ಮೃತರು.ಬೈಕ್ ಹಾಗೂ ಬೊಲೆರೊ ವಾಹನದ ನಡುವೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ದೌಡಾಯಿಸಿದ ನಂಜನಗೂಡು ಸಂಚಾರ ಠಾಣೆ ಪೊಲೀಸರು ಬೊಲೆರೊ ವಾಹನದ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.