ಮೈಸೂರು ವಿವಿ ಘಟಿಕೋತ್ಸವ: ‘ಚಿನ್ನ’ದ ವಿದ್ಯಾರ್ಥಿಗಳ ಸಂಭ್ರಮ ಮೈಸೂರು, ಅಕ್ಟೋಬರ್ 19, 2020 (..):ಮೈಸೂರು ವಿಶ್ವವಿದ್ಯಾಲಯದ 100ನೇ ಘಟಿಕೋತ್ಸವಕ್ಕೆ ಇಂದು ಕ್ರಾಫರ್ಡ್ ಹಾಲ್ ಸಾಕ್ಷಿಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಆನ್ ಲೈನ್ ಮೂಲಕ ಘಟಿಕೋತ್ಸವ ಭಾಷಣ ಮಾಡಲಿದ್ದು, ರಾಜ್ಯಪಾಲ ವಾಜುಬಾಯಿ ವಾಲಾ ಅವರು ಬೆಂಗಳೂರಿನ ರಾಜಭವನದಿಂದ ಲೈವ್ ನಲ್ಲಿ ಪಾಲ್ಗೊಂಡಿದ್ದಾರೆ. ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ, ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ಸೇರಿದಂತೆ ಹಲವು ಗಣ್ಯರು ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಚಿನ್ನದ ಪದಕ ವಿದ್ಯಾರ್ಥಿಗಳ ಸಂಭ್ರಮ:ನಾನಾ ವಿಭಾಗಗಳ ಸ್ನಾತಕೋತ್ತರ ಹಾಗೂ ಪದವಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನವನ್ನು ಗಣ್ಯರು ಪ್ರದಾನ ಮಾಡುತ್ತಿದ್ದಾರೆ. ನಾನಾ ವಿಷಯಗಳಲ್ಲಿ ಸಂಶೋಧನೆ ನಡೆಸಿ ಮಹಾ ಪ್ರಬಂಧ ಮಂಡಿಸಿರುವ ಅಭ್ಯರ್ಥಿಗಳಿಗೆ ಪಿಎಚ್ ಡಿ ಪದವಿಯನ್ನು ಗಣ್ಯರು ಪ್ರಧಾನ ಮಾಡುತ್ತಿದ್ದಾರೆ.