ಮಾಂಸ ಕೊಳ್ಳಲು ಬಂದಾತ ಸಿಕ್ಕಸಿಕ್ಕವರ ಮೇಲೆ ಚಾಕುವಿನಿಂದ ಇರಿದ : ಓರ್ವ ಸಾವು… ಬೆಂಗಳೂರು,ಅಕ್ಟೋಬರ್,18,2020(..):ಮಾಂಸ ಕೊಳ್ಳಲು ಬಂದಿದ್ದ ವ್ಯಕ್ತಿಯೋರ್ವ ಸಿಕ್ಕಸಿಕ್ಕವರ ಮೇಲೆ ಚಾಕುವಿನಿಂದ ಇರಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಗರದ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ‘ಪಿಳ್ಳಪ್ಪ ಗಾರ್ಡನ್ ನಿವಾಸಿ ಗಣೇಶ್ ಎಂಬಾತನೇ ಚಾಕುವಿನಿಂದ ಇರಿದ ವ್ಯಕ್ತಿ. ಆರೋಪಿ ಚಾಕು ಇರಿತದಿಂದ ತೀವ್ರ ಗಾಯಗೊಂಡಿದ್ದ ಮಾರಿ ಎಂಬುವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಐವರಿಗೆ ಗಾಯಗಳಾಗಿದ್ದು ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಮಾಹಿತಿ ಪಡೆದ ಪೊಲೀಸರು ಆರೋಪಿ ಗಣೇಶ್ ನನ್ನ ಬಂಧಿಸಿ ಚಾಕನ್ನ ವಶಕ್ಕೆ ಪಡೆದಿದ್ದಾರೆ. ಕೂಲಿ ಕಾರ್ಮಿಕನಾಗಿರುವ ಗಣೇಶ್ ಇಂದು ಮಾಂಸ ಖರೀದಿಸಲು ಮಾಟನ್ ಸ್ಟಾಲ್ ಗೆ ಬಂದಿದ್ದ.ಲ ಈ ವೇಳೆ ಮಟನ್ ರೇಟ್ ಜಾಸ್ತಿ ಇದೆ ಎಂದು ಗಲಾಟೆ ಮಾಡಿ ನಂತರ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. : - – – -