ನಟ ಕಿಚ್ಚ ಸುದೀಪ್ ದಂಪತಿಗಿಂದು ವಿವಾಹ ವಾರ್ಷಿಕೋತ್ಸವ… ಬೆಂಗಳೂರು,ಅಕ್ಟೋಬರ್,18,2020(..):ನಟ ಕಿಚ್ಚ ಸುದೀಪ್ ಮತ್ತು ಪ್ರಿಯಾ ಸುದೀಪ್ ದಂಪತಿಗೆ ಇಂದು ವಿವಾಹ ವಾರ್ಷಿಕೋತ್ಸವದ ದಿನ. ಹೌದು, ಸುದೀಪ್ ದಂಪತಿ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ನಟ ಸುದೀಪ್ ಮತ್ತು ಪ್ರಿಯಾ ಅವರು ವಿವಾಹವಾಗಿ 19ವರ್ಷ ತುಂಬಿದೆ. ಈ ದಿನವನ್ನು ಸುದೀಪ್ ದಂಪತಿ ವಿಶೇಷವಾಗಿ ಆಚರಣೆ ಮಾಡುತ್ತಿದ್ದಾರೆ. ನಟ ಸುದೀಪ್ ಮತ್ತು ಪ್ರಿಯಾಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.