ಕೆಪಿಎಸ್ ಸಿಯಿಂದ ‘ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ’ ಹುದ್ದೆಗಳಿಗೆ ಅಧಿಸೂಚನೆ… ಬೆಂಗಳೂರು,ಅಕ್ಟೋಬರ್, 15,2020(..):ಕರ್ನಾಟಕ ಲೋಕಸೇವಾ ಆಯೋಗವು () ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ( ) ಹುದ್ದೆಗಳಿಗೆ ಇದೀಗ ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗ್ರೂಪ್ ‘ಎ’ ವೃಂದದ ಬಿ.ಎಸ್ಸಿ. ಫಾರೆಸ್ಟ್ರಿ ವಿಷಯದಲ್ಲಿ ಪದವಿ ಹೊಂದಿದವರಿಂದ 8 ಹುದ್ದೆಗಳು ಹಾಗೂ ಬಿ.ಎಸ್ಸಿ ಫಾರೆಸ್ಟ್ರಿ ವಿಷಯವಲ್ಲದ ವಿಜ್ಞಾನ/ ಇಂಜಿನಿಯರಿಂಗ್ ವಿಷಯದಲ್ಲಿ ಪದವಿ ಹೊಂದಿದವರಿಂದ 8 ಹುದ್ದೆಗಳು, ಒಟ್ಟು 16 ಹುದ್ದೆಗಳನ್ನು ಭರ್ತಿ ಮಾಡಲು ಕೆಪಿಎಸ್ ಸಿ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ದಿನಾಂಕ 20-10-2020 ರಿಂದ 20-11-2020ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಶುಲ್ಕ ಪಾವತಿಸಲು ಕಡೆಯ ದಿನಾಂಕ 21-11-2020 ಆಗಿರುತ್ತದೆ. ಹೆಚ್ಚಿನ ವಿವರಗಳಿಗೆ ಆಯೋಗದ ವೆಬ್ ಸೈಟ್://...inನೋಡಬಹುದು. : - –- –