ನವರಾತ್ರಿ ಸ್ಪೆಷಲ್: ‘ನವ’ದಿನವೂ ಆಹಾರೋತ್ಸವ…. ಮೈಸೂರು,ಅಕ್ಟೋಬರ್,15,2020(..): ಪ್ರತಿ ದಿನ ವಿಭಿನ್ನ ರೀತಿಯ ರುಚಿಕಟ್ಟಾದ ಆಹಾರ ತಯಾರಿಸಿ ಗ್ರಾಹಕರನ್ನ ತನ್ನತ್ತ ಸೆಳೆಯುತ್ತಿರುವ ಮೈಸೂರಿನ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಲ್ಲಿ ಇದೇ ಅಕ್ಟೋಬರ್ 18ರಿಂದ 9 ದಿನಗಳ ಕಾಲ ದಸರಾ ಆಹಾರೋತ್ಸವವನ್ನ ಆಯೋಜಿಸಲಾಗಿದೆ. ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ನಗರದ ಟಿ.ಕೆ ಬಡಾವಣೆಯ ಗಣೇಶ ಭಂಡಾರ್ ಬಳಿ ಇರುವ ‘ಚೆಫ್ಸ್ ದಿ ಕ್ಯೂಸಿನ್ ಹೋಟೆಲ್’, ಅಕ್ಟೋಬರ್ 18 ರಿಂದ ಅಕ್ಟೋಬರ್ 26ರವರೆಗೆ ಆಹಾರೋತ್ಸವ ಆಯೋಜಿಸಿದ್ದು, ಈ 9 ದಿನಗಳ ಕಾಲ ಗ್ರಾಹಕರಿಗೆ ಬಾಯಿ ನಿರೋರೆಸುವ ವಿಧವಿಧವಾದ ಆಹಾರ ಪದಾರ್ಥ ತಿಂಡಿ ತಿನಿಸುಗಳು ಲಭ್ಯವಿರಲಿವೆ. ಆಹಾರೋತ್ಸವದ ಮೊದಲ ದಿನ ದಸರಾ ಆಹಾರ ದೋಸೆ ಮೇಳ, ಅಕ್ಟೋಬರ್ 19 ರಂದು ವೆಜ್ ಬಿರಿಯಾನಿ ಮೇಳ, ಅ.20 ರಂದು ಇಂಡಿಯನ್ ರೋಟಿ ಕರಿ ಮೇಳ, ಅ.21 ರಂದು ಮಂಗಳೂರು ಸ್ಟೈಲ್ ಫುಡ್ ಮೇಳ,ಸೌತ್ ಇಂಡಿಯನ್ ಬಜ್ಜಿ ಮೇಳ ನಡೆಯಲಿದೆ. ಹಾಗೆಯೇ ಅ.22 ರಂದು ರೋಟಿ ಕರಿ ಮೇಳೆ ಸೌತ್ ಇಂಡಿಯನ್, ಅ.23 ರಂದು ಪರೋಟ ಮೇಳ, ಅ.24 ರಂದು ಓರಿಯಂಟಲ್ ಮೇಳ, ಅ.25 ರಂದು ಚಾಟ್ಸ್ ಮೇಳ ಅ.26 ಆಹಾರೋತ್ಸವದ ಕೊನೆಯ ದಿನ ಬಾಳೆ ಎಲೆ ಊಟ ಇರಲಿದೆ. ಹೀಗಾಗಿ ಆಹಾರಪ್ರಿಯರು ಈ 9 ದಿನಗಳಲ್ಲಿ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ಗೆ ಭೇಟಿ ನೀಡಿ ತಮಗೆ ಬೇಕಾದ ಬೋಜನ ಸವಿದು ಸಂತಸಪಡಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 0821-4190086, 7411883230, 9448601060 : - - ---