ವ್ಯಾಪಾರದಲ್ಲಿ ಚೌಕಾಸಿ ಮಾಡಿದ ಗ್ರಾಹಕನಿಗೆ ಕತ್ತರಿಯಿಂದ ಇರಿದ ಮಾಲೀಕ ಮೈಸೂರು,ಸೆಪ್ಟಂಬರ್, 23,2024 (..):ವ್ಯಾಪಾರದಲ್ಲಿ ಚೌಕಾಸಿ ಮಾಡಿದ ಗ್ರಾಹಕನಿಗೆ ಮಾಲೀಕ ಕತ್ತರಿಯಿಂದ ಚುಚ್ಚಿದ ಘಟನೆ ಮೈಸೂರು ಜಿಲ್ಲೆ ಹುಣಸೂರಿನಲ್ಲಿ ನಡೆದಿದೆ. ಹುಣಸೂರಿನ ಬೈಪಾಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕುಶಾಲನಗರದ ಬೈಚನಹಳ್ಳಿ ನಂದೀಶ ಇರಿತಕ್ಕೆ ಒಳಗಾದ ಗ್ರಾಹಕ. ಬೈಪಾಸ್ ರಸ್ತೆಯ ಮುರುಗೇಶ್ ಜೋಗಿ ಮಾರ್ಕೆಟಿಂಗ್ ಮಾಲೀಕನಿಂದ ಹಲ್ಲೆಯಾಗಿದೆ. ತನ್ನ ಗೂಡ್ಸ್ ವಾಹನಕ್ಕೆ ಮ್ಯಾಟ್ ಖರೀದಿಸಲು ಮುರುಗೇಶ್ ಜೋಗಿ ಅಂಗಡಿಗೆ ಹೋಗಿದ್ದ ನಂದೀಶ್, ಇದೇ ವೇಳೆ 2300 ಬೆಲೆಯ ಮ್ಯಾಟ್ ಗೆ 2000 ಕ್ಕೆ ಕೇಳಿದ್ದರು. ಇದೇ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಇದೇ ವೇಳೆ ಕೈಯಲ್ಲಿದ್ದ ಕತ್ತರಿಯಿಂದ ಮಾಲೀಕ ಮುರುಗೇಶ್ ಚುಚ್ಚಿದ್ದಾನೆ. ಸಹಾಯಕ್ಕೆ ಬಂದ ರಮೇಶ್ ಮೇಲೂ ಹಲ್ಲೆ ಮಾಡಿದ್ದಾನೆ. ಗಾಯಗೊಂಡ ನಂದೀಶ್ ಗೆ ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಲೀಕ ಮುರುಗೇಶ್ ಜೋಗಿ ಸೇರಿ ಮೂವರ ವಿರುದ್ಧ ಹುಣಸೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : , , ,