ಮಳೆಗೆ ಮತ್ತೊಂದು ಬಲಿ: ಮನೆ ಗೋಡೆ ಕುಸಿದು ವ್ಯಕ್ತಿ ಸಾವು ಕಲಬುರಗಿ,ಸೆಪ್ಟಂಬರ್,23,2024 (..):ರಾಜ್ಯದಲ್ಲಿ ಮಳೆ ಮತ್ತೊಂದು ಬಲಿ ಪಡೆದಿದ್ದು,ಮನೆ ಗೋಡೆ ಕುಸಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕುರುಕುಂಟಾದಲ್ಲಿ ನಡೆದಿದೆ. ರಾಜೇಂದ್ರ ಪಾಟೀಲ್ (62) ಮೃತ ವ್ಯಕ್ತಿ. ರಾಜೇಂದ್ರ ಪಾಟೀಲ್ ಮಗಳ ಮನೆಗೆ ಬಂದಿದ್ದರು. ಮಗಳ ಮನೆಯಲ್ಲಿ ಮಲಗಿದ್ದ ವೇಳೆ ಮಳೆಯಿಂದಾಗಿ ಮನೆ ಗೋಡೆ ಕುಸಿದು ಬಿದ್ದಿದೆ. ಮಣ್ಣಿನಡಿ ಸಿಲುಕಿದ್ದ ರಾಜೆಂದ್ರ ಪಾಟೀಲ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕುರುಕುಂಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : , , , ,