ಸಚಿವ ಆರ್.ಅಶೋಕ್ ಅವರ ‘ಬಂಡೆ’ ಹೇಳಿಕೆಗೆ ತಿರುಗೇಟು ಕೊಟ್ಟ ಡಿ.ಕೆ ಶಿವಕುಮಾರ್… ಬೆಂಗಳೂರು,ಅಕ್ಟೋಬರ್,14,2020(..):ಉಪಚುನಾವಣೆ ಹಿನ್ನೆಲೆ, ಆರ್.ಆರ್ ನಗರದಲ್ಲಿ ಯಾವ ಬಂಡೆಯೂ ಇಲ್ಲ. ಕಲ್ಲು ಇಲ್ಲ. ಇಲ್ಲಿ ಬಂಡೆ ಆಟ ನಡೆಯಲ್ಲ ಎಂದು ಟಾಂಗ್ ನೀಡಿದ್ದ ಕಂದಾಯ ಸಚಿವ ಆರ್.ಅಶೋಕ್ ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಆರ್.ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಬಂಡೆ ಪುಡಿ ಮಾಡ್ತಾರಾ..? ಪಾಪ ಆರ್.ಅಶೋಕ್ ದೊಡ್ಡವರು. ಬಂಡೆ ಅನ್ನೋದು ಪ್ರಕೃತಿ. ಬಂಡೆಯನ್ನು ಕಡಿದು ಶಿಲೆ ಮಾಡಿದರೇ ಆಕೃತಿ. ಡೈಲಿ ಡೈನಾಮೈಟ್ ಇಡ್ತಾರಲ್ಲಾ. ಬೆಳಿಗ್ಗೆ ಎದ್ದು ಹೊಸ ಹೊಸ ಸ್ಟೋರಿ ಮಾಡ್ತಾನೆ ಇದ್ದಾರಲ್ವಾ..? ಒಂದಿನ ಡಿ.ಜೆ ಹಳ್ಳಿ, ಮತ್ತೊಂದು ದಿನ ಕೆ.ಜಿ ಹಳ್ಳಿ ಎಂದು ಬಿಜೆಪಿ ನಾಯಕರನ್ನ ಟೀಕಿಟಿಸಿದರು. ಬೆಂಗಳೂರಿನ ಡಿ.ಜೆ ಹಳ್ಳಿ ಕೆ.ಜಿಹಳ್ಳಿ ಗಲಾಟೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಿಲ್ಲ. ನಮ್ಮ ಶಾಸಕರನ್ನ ವಿಚಾರಣೆಗೆ ಒಳಪಡಿಸಲಾಗಿದೆ. ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ. ಕಾಂಗ್ರೆಸ್‍ನ ಯಾರು ಗಲಭೆ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಆದರೆ ಬಿಜೆಪಿ ಸರ್ಕಾರ ನಮ್ಮನ್ನ ಬೆದರಿಸುವ ತಂತ್ರ ಮಾಡುತ್ತಿದೆ. ಆದರೆ ನಾವು ಬೆದರಿಕೆಗೆ ಬಗ್ಗಲ್ಲ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು. : - - – - -