ಕೋವಿಡ್ ನಿಂದ ಮೃತಪಟ್ಟ ಸಾರಿಗೆ ನೌಕರರ ಕುಟುಂಬಸ್ಥರಿಗೆ ಪರಿಹಾರ: ಆರ್ಥಿಕ ಇಲಾಖೆಗೆ ಪ್ರಸ್ತಾವನೆ-ಡಿಸಿಎಂ ಲಕ್ಷ್ಮಣ್ ಸವದಿ… ಬೆಳಗಾವಿ,ಅಕ್ಟೋಬರ್,14,2020(..):ಕೊರೋನಾದಿಂದ ಮೃತಪಟ್ಟ ಸಾರಿಗೆ ನೌಕರರ ಕುಟುಂಬಕ್ಕೆ 30 ಲಕ್ಷ ರೂ ಪರಿಹಾರ ನೀಡುವ ವಿಚಾರ ಸಂಬಂಧ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ಕೋವಿಡ್ ನಿಂದ 50 ಸಾರಿಗೆ ನೌಕರರು ಮೃತಪಟ್ಟಿದ್ದಾರೆ. ಮೃತಪಟ್ಟ ಸಾರಿಗೆ ನೌಕರರ ಕುಟುಂಬಸ್ಥರಿಗೆ ಪರಿಹಾರ ನೀಡಲಾಗುತ್ತದೆ. ಅದಕ್ಕಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಹಣಕಾಸು ತೊಂದರೆಯಿಂದ ವಿಳಂಬವಾಗಿದೆ ಎಂದರು. ಕೆಎಸ್ ಆರ್ ಟಿಸಿಗೆ ಈಗಲೂ ನಷ್ಟವಾಗುತ್ತಿದೆ. 3 ಸಾವಿರ ಕೊಟಿಗೂ ಹೆಚ್ಚು ಹಣ ಸಾರಿಗೆ ಸಂಸ್ಥೆಗೆ ನಷ್ಟವಾಗುತ್ತಿದೆ. ಈಗ ಬರುತ್ತಿರುವ ಆದಾಯ ಡೀಸೆಲ್ ಗೆ ಸಾಕಾಗುವುದಿಲ್ಲ. ಇನ್ನು ಸಾರಿಗೆ ಸಿಬ್ಬಂದಿ ವೇತನ ತಡವಾಗುತ್ತಿದೆ. ವೇತನ ತಡವಾದರೂ ಕಡಿತ ಮಾಡಲ್ಲ ಎಂದು ಲಕ್ಷ್ಮಣ್ ಸವದಿ ಸ್ಪಷ್ಟನೆ ನೀಡಿದರು. : - - – - - –- .