ಆರ್.ಆರ್ ನಗರದಲ್ಲಿ ನಾನೇ ಅಭ್ಯರ್ಥಿ: ಇಲ್ಲಿ ಯಾವ ಬಂಡೆ ಆಟನೂ ನಡೆಯಲ್ಲ-ಡಿಕೆಶಿಗೆ ಸಚಿವ ಆರ್.ಅಶೋಕ್ ಟಾಂಗ್… ಬೆಂಗಳೂರು,ಅಕ್ಟೋಬರ್,14,2020(..):ಆರ್.ಆರ್ ನಗರದಲ್ಲಿ ನಾನೇ ಅಭ್ಯರ್ಥಿ. ಇಲ್ಲಿ ಯಾವ ಬಂಡೆ ಆಟನೂ ನಡೆಯಲ್ಲ. ಅವರ ಆಟ ಏನಿದ್ದರೂ ಕನಕಪುರದಲ್ಲಿ ಮಾತ್ರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ದಾರೆ. ಜಿದ್ದಾಜಿದ್ಧಿನ ಕಣವಾಗಿ ಮಾರ್ಪಟ್ಟಿರುವ ಆರ್.ಆರ್ ನಗರ ಉಪಚುನಾವಣಾ ಕಣದಲ್ಲಿ ಈಗಾಗಲೇ ಮೂರು ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಮಧ್ಯೆ ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಸಚಿವ ಆರ್ ಅಶೋಕ್, ಆರ್.ಆರ್ ನಗರದಲ್ಲಿ ನಾನೇ ಅಭ್ಯರ್ಥಿ.ಇಲ್ಲಿ ಯಾವ ಬಂಡೆ ಕಲ್ಲು ಇಲ್ಲ. ಬಂಡೆ ಕಲ್ಲು ಏನೇ ಇದ್ದರೂ ಅದು ಕನಕಪುರದಲ್ಲಿ ಮಾತ್ರ . ಇಲ್ಲಿ ಅವರ ಆಟ ನಡೆಯಲ್ಲ ಎಂದು ಕುಟುಕಿದರು. ಡಿ.ಕೆ ಶಿವಕುಮಾರ್ ನಮ್ಮನ್ನ ನೋಡಿ ಮತ ಹಾಕಿ ಎನ್ನುತ್ತಾರೆ. ಆದರೆ ಮುನಿರತ್ನ ಅವರ ಕೆಲಸವನ್ನ ನೋಡಿ. ಆರ್.ಆರ್ ನಗರ ಅಭಿವೃದ್ಧಿಯಾಗಿದೆ. ಹೀಗಾಗಿ ಮುನಿರತ್ನ ಗೆಲ್ಲಿಸಿ ಎಂದು ಆರ್.ಅಶೋಕ್ ಹೇಳಿದರು. : - - - . - – - .