ಕ್ಯಾಪ್ಟನ್ ರಾಜಾರಾವ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ: ಸಚಿವ ರಮೇಶ್ ಜಾರಕಿಹೊಳಿಗೆ ಮನವಿ‌ ನೀಡಿದ ಇಂಜಿನಿಯರ್ಸ್. ಬೆಂಗಳೂರು,ಅಕ್ಟೋಬರ್,13,2020(..): ಕರ್ನಾಟಕ ರಾಜ್ಯದ ಪ್ರಖ್ಯಾತ ಮುಖ್ಯ ಅಭಿಯಂತರರಾದ (ನಿವೃತ್ತ) ಕ್ಯಾಪ್ಟನ್ ರಾಜಾರಾವ್ ಅವರಿಗೆ ಈ ಬಾರಿಯ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವಂತೆ ಜಲಸಂಪನ್ಮೂಲ ಇಂಜಿನಿಯರ್ ಗಳ ಸಂಘ, ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ‌ ಅವರಿಗೆ ಮನವಿ ಮಾಡಿದೆ. ವಿಧಾನಸೌಧದಲ್ಲಿಂದು ಸಚಿವರನ್ನು ಭೇಟಿ ಮಾಡಿದ ಅಭಿಯಂತರರು, ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ತಾಂತ್ರಿಕ ಕ್ಷೇತ್ರ ವನ್ನೂ ಪರಿಗಣಿಸುವಂತೆ ಒತ್ತಾಯಿಸಿದರು. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಅಭಿಯಂತರರು ಸದಾ ಶ್ರಮಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ. 6 ದಶಕಗಳ ಕಾಲ ರಾಜಾರಾವ್ ಅವರು ಸಲ್ಲಿಸಿರುವ ಸೇವೆ ನಮಗೆಲ್ಲ ಮಾದರಿ. ಹಾಗಾಗಿ ಈ ಕೂಡಲೇ ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಈ ಕುರಿತು ಮಾತನಾಡಿ, ತಾಂತ್ರಿಕ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಗಮನಿಸಿ ಕ್ಯಾಪ್ಟನ್ ಎಸ್. ರಾಜಾರಾವ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ಶಿಫಾರಸ್ಸು ಮಾಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು. : .- - - - - –