: ಮೈಸೂರು ವಿವಿ 100 ನೇ ಘಟಿಕೋತ್ಸವ: ಪಿಎಚ್ಡಿ ಪಡೆಯಲಿರುವ ರಾಜ್ಯದ ಐಎಎಸ್ ಹಾಗೂ ಐಎಫ್ಎಸ್ ಅಧಿಕಾರಿಗಳು. ಮೈಸೂರು, ಅ.13, 2020 : (.. ) : ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ 100 ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯದ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಬ್ಬರು ಪಿಎಚ್ಡಿ ಪದವಿ ಪಡೆಯುತ್ತಿರುವುದು ವಿಶೇಷ. ರಾಜ್ಯದ ಹಿರಿಯ ಐಎಎಸ್ ಅಧಿಕಾರಿ, ಕರ್ನಾಟಕ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹಾಗೂ ಐಎಫ್ಎಸ್ ಅಧಿಕಾರಿ , ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಆಯುಕ್ತ ಮನೋಜ್ ರಾಜನ್ ಪಿಎಚ್ಡಿ ಪದವಿ ಪಡೆಯಲಿರುವ ಅಧಿಕಾರಿಗಳು. ಐಎಎಸ್ ಅಧಿಕಾರಿ ಸಂಜೀವ್ ಕುಮಾರ್ ಅವರು ನರೇಗಾ- ಕಾನೂನು ಹಕ್ಕು, ವಿಧಾನ ಮತ್ತು ಸುಸ್ಥಿರ ಬದುಕು- ಕರ್ನಾಕಟದಲ್ಲಿ ಒಂದು ತುಲನಾತ್ಮಕ ಅಧ್ಯಯನ ‘ ( ‘ - , - ‘ ) ವಿಷಯಕ್ಕೆ ಸಂಬಂಧಿಸಿದಂತೆ ಮಂಡಿಸಿರುವ ಮಹಾಪ್ರಬಂಧವನ್ನು ಮೈಸೂರು ವಿವಿ ಪಿಎಚ್ಡಿ ಪದವಿಗೆ ಅಂಗೀಕರಿಸಿದೆ. ಮೈಸೂರು ವಿವಿ ಐಡಿಎಸ್ ( ) ಪ್ರಧ್ಯಾಪಕರಾದ ಪ್ರೊ. ಶ್ರೀಜಯ ದೇವರಾಜ್ ಅರಸ್ ಮತ್ತು ಪ್ರೊ.ಎಸ್. ಮಾದೇಶ್ವರನ್ ಈ ಸಂಶೋಧನಾ ಪ್ರಬಂಧಕ್ಕೆ ಮಾರ್ಗದರ್ಶಕರು. ಐಎಫ್ಎಸ್ ಅಧಿಕಾರಿ ಮನೋಜ್ ರಾಜನ್ ಅವರು, ‘ ದೇಶದಲ್ಲಿ ಕೃಷಿ ಮಾರುಕಟ್ಟೆ ಸುಧಾರಣೆ ಮತ್ತು ತಂತ್ರಜ್ಞಾನದ ಪಾತ್ರ ‘ ( ‘ ) ವಿಷಯ ಬಗ್ಗೆ ಮಂಡಿಸಿದ ಮಹಾಪ್ರಬಂಧವನ್ನು ಮೈಸೂರು ವಿವಿ ಅಗ್ರಿ ಬಿಸ್ನೆಸ್ ವಿಭಾಗದಲ್ಲಿ ಡಿ.ಲಿಟ್ ಪದವಿಗೆ ಅಂಗೀಕರಿಸಿದೆ. : ---- -.---------100th- : : , , . .- , - .