ನಾಳೆಯಿಂದ ಕ್ಯಾಪ್ಟನ್ ಅಭಿಮನ್ಯುವಿಗೆ ಮರದ ಅಂಬಾರಿ ಹೊರಿಸಿ ತಾಲೀಮು… ಮೈಸೂರು,ಅಕ್ಟೋಬರ್,13,2020(..):ಕೊರೋನಾ ಸಂಕಷ್ಟದ ನಡುವೆ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿಯಲ್ಲಿ ಸಕಲ ಸಿದ್ದತೆ ಸಾಗುತ್ತಿದ್ದು ಈ ಮಧ್ಯೆ ಅರಮನೆ ಅಂಗಳದಲ್ಲಿ ದಸರಾ ಆನೆಗಳಿಗೆ ತಾಲೀಮು ಮುಂದುವರೆದಿದೆ. ಈ ಬಾರಿ ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು ಹಾಗೂ ಇತರೇ ಆನೆಗಳಿಗೆ ಇಂದು ಮರಳು ಭಾರ ಹೊರಿಸಿ ತಾಲೀಮು ನಡೆಸಲಾಯಿತು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಮರಳು ಮೂಟೆ ಹೊತ್ತು ಸಾಗುವ ಮೂಲಕ ತಾಲೀಮಿನಲ್ಲಿ ಭಾಗಿಯಾಗಿದ್ದವು. ದಸರಾ ಆನೆ ಗೋಪಿಗೆ ಮರಳು ಮೂಟೆ ತಾಲೀಮು ಇಂದಿಗೆ ಅಂತ್ಯವಾಗಿದೆ. ಇನ್ನು ನಾಳೆಯಿಂದ ಕ್ಯಾಪ್ಟನ್ ಅಭಿಮನ್ಯು ಆನೆಗೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಗುತ್ತದೆ. ಅಭಿಮನ್ಯು ಸೇರಿ ಗೋಪಿ, ವಿಕ್ರಮನಿಗೂ ಮರದ‌ ಅಂಬಾರಿ ಹೊರಿಸಿ ತಾಲೀಮು ನಡೆಸಲಾಗುತ್ತದೆ. : - – – - - .