ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಖ್ಯಾತ ನಟಿ ಖುಷ್ಬೂ… ಚೆನ್ನೈ,ಅಕ್ಟೋಬರ್,12,2020(..):ಖ್ಯಾತ ಹಿರಿಯ ನಟಿ ಖುಷ್ಬೂ ಅವರು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ತಾವು ಕಾಂಗ್ರೆಸ್ ಪಕ್ಷಕ್ಕೆ ಮತ್ತು ಎಐಸಿಸಿ ರಾಷ್ಟ್ರೀಯ ವಕ್ತಾರೆ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ನಟಿ ಖುಷ್ಬೂ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಖುಷ್ಬೂ ಅವರು ರಾಜೀನಾಮೆ ನೀಡಿದ ತಕ್ಷಣವೇ ಅವರನ್ನು ಎಐಸಿಸಿ ವಕ್ತಾರೆ ಹುದ್ದೆಯಿಂದ ತೆಗೆದು ಹಾಕಿದೆ ಎನ್ನಲಾಗಿದೆ. ಇನ್ನು ನಟಿ ಖುಷ್ಬೂ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. : - –