ಯುಪಿ ಹತ್ರಾಸ್ ನಲ್ಲಿ ಯುವತಿ ಮೇಲಿನ ಅತ್ಯಾಚಾರ ಖಂಡಿಸಿ ಮೌನ ಪ್ರತಿಭಟನೆ….. ಮೈಸೂರು,ಅಕ್ಟೋಬರ್,11,2020(..):ಉತ್ತರ ಪ್ರದೇಶದಲ್ಲಿ ಯುವತಿ ಮೇಲಿನ ಅತ್ಯಾಚಾರ ಖಂಡಿಸಿ ಮೈಸೂರು ವಿವಿ ವಿಶ್ವಮಾನವ ನೌಕರರ ವೇದಿಕೆಯಿಂದ ಮೌನ ಪ್ರತಿಭಟನೆ ನಡೆಯಿತು. ನಗರದ ಟೌನ್ ಹಾಲ್ ಮುಂಭಾಗ ಜಮಾಯಿಸಿದ ಮೈಸೂರು ವಿವಿ ವಿಶ್ವಮಾನವ ನೌಕರರ ವೇದಿಕೆಯ ಸದಸ್ಯರು, ಘಟನೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಉತ್ತರಪ್ರದೇಶದ ಈ ಘಟನೆ ಖಂಡನೀಯ. ಮನೀಷಾಳ ಸಾವಿಗೆ ಕಾರಣರಾದವರಿಗೆ ಕಾನೂನಿನ ಮೂಲಕ ಆದಷ್ಟು ಬೇಗ ಶಿಕ್ಷೆಯಾಗಬೇಕು. ಹೆಣ್ಣು ಮಕ್ಕಳ ರಕ್ಷಣೆಗೆ ಸರ್ಕಾರಗಳು ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಪ್ರತಿಭಟನಕಾರರು ಆಗ್ರಹಿಸಿದರು. ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಇಡೀ ದೇಶದಲ್ಲೇ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ಪ್ರಕರಣ ಕುರಿತು ಸಿಬಿಐ ತನಿಖೆ ಆರಂಭವಾಗಿದೆ. : - - - - -