ವಿಡಿಯೋ ಸಂದೇಶ ನೀಡಿ ಬಳಿಕ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ…. ಮೈಸೂರು,ಅಕ್ಟೋಬರ್,11,2020(..):ಇಬ್ಬರು ವ್ಯಕ್ತಿಗಳ ಕಿರುಕುಳದಿಂದ ಸಾಯುತ್ತಿರುವುದಾಗಿ ಮೊಬೈಲ್ ವೀಡಿಯೋ ಸಂದೇಶ ನೀಡಿ ಬಳಿಕ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿಯಲ್ಲಿ ಈ ಘಟನೆ‌ ನಡೆದಿದೆ. ಪಂಚವಳ್ಳಿ ಗ್ರಾಮದ ನಿವಾಸಿ ಯೋಗೇಶ್ (35) ಮೃತ ಪಟ್ಟವರು. ಇಬ್ಬರು ವ್ಯಕ್ತಿಗಳ ಕಿರುಕುಳದಿಂದ ಸಾಯುತ್ತಿರುವುದಾಗಿ ಮೊಬೈಲ್ ವೀಡಿಯೋ ಸಂದೇಶ ನೀಡಿದ ಬಳಿಕ ಯೋಗೇಶ್ ನಾಪತ್ತೆಯಾಗಿದ್ದರು. ನಂತರ ಯೋಗೇಶ್ ಗಾಗಿ ಕುಟುಂಬದ ಸದಸ್ಯರು ತೀವ್ರ ಹುಟುಕಾಟ ನಡೆಸಿದ್ದರು. ನಂತರ ಪಂಚವಳ್ಳಿ ಬಳಿಯಿರುವ ಕಲ್ಲುಕೋರೆ ಗುಂಡಿಯಲ್ಲಿ ಯೋಗೇಶ್ ಶವವಾಗಿ ಪತ್ತೆಯಾಗಿದ್ದಾರೆ. ಯೋಗೇಶ್ ಸಾವನ್ನಪ್ಪಿದ ನಂತರ ಘಟನೆ ಕುರಿತು ಅಣ್ಣ ಮಲ್ಲೇಶ್ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - - - – -