ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅಸಮಾಧಾನ… ಬೆಂಗಳೂರು,ಅಕ್ಟೋಬರ್,10,2020(..): ಹೊಸದುರ್ಗ ಕ್ಷೇತ್ರದಲ್ಲಿ ಮೀಸಲಾತಿ ಸಂಬಂಧ ನನ್ನ ಅಭಿಪ್ರಾಯ ಕೇಳಲಾಯಿತು. ಆದರೆ ,ನನ್ನ ಅಭಿಪ್ರಾಯವನ್ನು ಪರಿಗಣಿಸಿಲ್ಲ. ಸಚಿವರು, ಶಾಸಕರ ಪತ್ರಗಳಿಗೆ, ಮನವಿಗಳಿಗೆ ಸರಕಾರದಲ್ಲಿ ಬೆಲೆಯಿಲ್ಲ ಎಂದು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗ ಕೇಳುವುದು ಒಂದಾದರೆ, ತೀರ್ಮಾನ ಬೇರೆ ಎನ್ನುವಂತ್ತಾಗಿದೆ. ಹೀಗಾಗಿ, ಸಿಎಂ ಅವರು ನನ್ನ ರಾಜೀನಾಮೆ ಪತ್ರವನ್ನಾದರೂ ಸ್ವೀಕರಿಸಬೇಕು. ಸಚಿವರು, ಶಾಸಕರ ಪತ್ರಗಳಿಗೆ, ಮನವಿಗಳಿಗೆ ಸರಕಾರದಲ್ಲಿ ಬೆಲೆಯಿಲ್ಲ. ಮುಖ್ಯಮಂತ್ರಿಗಳು ನನ್ನ ರಾಜೀನಾಮೆಯಾದರೂ ಸ್ವೀಕರಿಸಬೇಕು ಎಂದು ಬೇಸರವ್ಯಕ್ತಪಡಿಸಿದ್ದಾರೆ. : ----- - -