ಬಾಬಾ ಅಣುಸಂಶೋಧನಾ ಕೇಂದ್ರದ ವಿಜ್ಞಾನಿ ನಿಗೂಢ ಕಣ್ಮರೆ… ಮೈಸೂರು,ಅಕ್ಟೋಬರ್,10,2020(..):ನಗರದ ಬಾಬಾ ಅಣುಸಂಶೋಧನಾ ಕೇಂದ್ರ(ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್)ದ ಯುವ ವಿಜ್ಞಾನಿ ಅಭಿಷೇಕ್ ರೆಡ್ಡಿ ಗುಲ್ಲಾ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಮೈಸೂರಿನ ಹೊರವಲಯ ಇಲವಾಲ ನಿವಾಸಿಯಾಗಿರುವ ಅಭಿಷೇಕ್ ಆರ್ ಎಂಪಿಯಲ್ಲಿ ವಿಜ್ಞಾನಿಯಾಗಿ ಕೆಲಸ ನಿರ್ವಹಿಸುತ್ತಿದ್ರು. ಅಕ್ಟೋಬರ್ 6ರ ಮಧ್ಯಾಹ್ನದಿಂದ ಇವರು ಕಣ್ಮರೆಯಾಗಿದ್ದಾರೆ. ಅಭಿಷೇಕ್ ಜತೆ ಬ್ಲಾಕ್ ಆಕ್ಟಿವಾ( 09 0013) ವಾಹನವೂ ನಾಪತ್ತೆಯಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ. ಆದರೂ ಈ ತನಕ ಅಭಿಷೇಕ್ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಅಭಿಷೇಕ್ ರೆಡ್ಡಿ ಗುಲ್ಲಾ ಅವರ ಕುಟುಂಬಸ್ಥರು ಮತ್ತು ಸ್ನೇಹಿತರು ಆತಂಕಕ್ಕೆ ಒಳಗಾಗಿದ್ದಾರೆ. : -- –-