ಸಾಹಿತಿ ಎಸ್.ಎಲ್. ಭೈರಪ್ಪಗೆ ಡಾ.ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರದಾನ ಮೈಸೂರು,ಅಕ್ಟೋಬರ್,10,2020(..): ಸಾಹಿತಿ ಎಸ್.ಎಲ್. ಭೈರಪ್ಪಗೆ ಡಾ.ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರದಾನ ಮಾಡಲಾಯಿತು.ಕುವೆಂಪು ನಗರದಲ್ಲಿರುವ ಪ್ರಮಥಿ ಶಾಲೆಯಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟ್ ಹಾಗೂ ಡಾ.ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನದ ಸಹಯೋಗದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ಸಚಿವರಾದ ಕೋಟಾ ಶ್ರೀನಿವಾಸಪೂಜಾರಿ ಹಾಗೂ ಎಸ್.ಟಿ.ಸೋಮಶೇಖರ್ ಅವರು ಡಾ.ಶಿವರಾಮ ಕಾರಂತರ ಹುಟ್ಟೂರು ಪ್ರಶಸ್ತಿ ನೀಡಿ, ಮೈಸೂರು ಪೇಟ ,ಶಾಲು, ಹಾರ ನೆನೆಪಿನ ಕಾಣಿಕೆ ‌ನೀಡಿ ಗೌರವಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ಡಿಸಿ ರೋಹಿಣಿ ಸಿಂಧೂರಿ, ಮೂಡ ಅಧ್ಯಕ್ಷ ಎಚ್.ವಿ.ರಾಜೀವ್ ಮುಂತಾದವರು ಭಾಗವಹಿಸಿದ್ದರು. : ..-. -