ವಿದ್ಯಾಗಮ : 23 ವಿದ್ಯಾರ್ಥಿಗಳಿಗೆ ಕೊರೊನಾ ಬೆಳಗಾವಿ,ಅಕ್ಟೋಬರ್,09,2020(..): ವಿದ್ಯಾಗಮ ಯೋಜನೆಯಡಿ ಪಾಠ ಕಲಿಯುತ್ತಿದ್ದ 23 ವಿದ್ಯಾರ್ಥಿಗಳಿಗೆ ಕೊರೊನಾ ತಗುಲಿದೆ.ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಎಂ.ತಿಮ್ಮಾಪುರ ಗ್ರಾಮದಲ್ಲಿ 23 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅಕ್ಟೋಬರ್ 4ರಂದು ಸಾಮೂಹಿಕ ಕೋವಿಡ್ ಟೆಸ್ಟ್ ನಡೆಸಲಾಗಿತ್ತು ಈ ಸಂದರ್ಭ ಎರಡನೇ, ಮೂರನೇ, ನಾಲ್ಕನೇ ತರಗತಿಯ 23 ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿದೆ. ಈ 23 ಮಂದಿ ವಿದ್ಯಾರ್ಥಿಗಳು ವಿದ್ಯಾಗಮ ಯೋಜನೆಯಡಿ ಪಾಠ ಕಲಿಯುತ್ತಿದ್ದರು ಎಂದು ತಿಳಿದು ಬಂದಿದೆ. : --23