ರಾಮನಗರ ಡಿಸಿ ಹೆಸರಲ್ಲಿ ನಕಲಿ ಇ-ಮೇಲ್ ! ‘ಖತರ್ನಾಕ್’ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ರಾಮನಗರ, ಅಕ್ಟೋಬರ್ 09, 2020 (..): ರಾಮನಗರ ಜಿಲ್ಲಾಧಿಕಾರಿ ಅವರ ಹೆಸರಿನಲ್ಲಿ ನಕಲಿ ಐಡಿಯಿಂದ ಇ-ಮೇಲ್ ಕಳುಹಿಸುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಎಚ್ಚರಿಸಿದ್ದಾರೆ. ಜಿಲ್ಲಾಧಿಕಾರಿ ಅವರ ಹೆಸರಿನಲ್ಲಿ <chiefexecutive00124@.> ನಕಲಿ ಇಮೇಲ್ ಖಾತೆ ತೆರೆದು ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳಿಗೆ ಗುರುವಾರದಂದು (ಅ. 8) ತಪ್ಪು ಸಂದೇಶ ಬರುವಂತಹ ಇಮೇಲ್ ಕಳುಹಿಸಲಾಗಿರುವುದು ಅವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇಂಥವರ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. <.@.> ನಿಂದ ಇ-ಮೇಲ್ ಕಳಿಸಲಾಗುತ್ತದೆ. ಸದರಿ ಐಡಿಯಿಂದ ಬರುವ ಸಂದೇಶಗಳನ್ನು ಹೊರತುಪಡಿಸಿ ಇನ್ನಾವುದೇ ಐಡಿಗಳಿಂದ ಬರುವ ಬರುವಂತಹ ಸಂದೇಶ /ಮಾಹಿತಿಗಳನ್ನು ಪರಿಗಣಿಸಬಾರದು ಎಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ. ಜಿಲ್ಲಾಧಿಕಾರಿಗಳ ಅಧಿಕೃತ ಇ-ಮೇಲ್ ಐಡಿ ಹೊರತುಪಡಿಸಿ ಇನ್ನಾವುದೇ ನಕಲಿ ಅಥವಾ ಅನಧಿಕೃತ ಐಡಿಗಳಿಂದ ಸಂದೇಶ ಇಲ್ಲವೇ ಮಾಹಿತಿ ಬಂದಲ್ಲಿ ಆ ಬಗ್ಗೆ ಕೂಡಲೇ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಹೆಸರು ಬಳಸಿಕೊಂಡು ಹೊಸದಾಗಿ ನಕಲಿ ಇ-ಮೇಲ್ ಖಾತೆ ತೆರೆಯುವುದು ಇಲ್ಲವೇ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶಗಳನ್ನು ರವಾನಿಸುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.