ಡ್ರಗ್ಸ್ ಮಾಫಿಯಾ ರಾಗಿಣಿ, ಸಂಜನಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ… ಬೆಂಗಳೂರು,ಅಕ್ಟೋಬರ್,09,2020(..): ಡ್ರಗ್ಸ್ ಮಾಫಿಯಾ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ರಾಗಿಣಿ, ಸಂಜನಾ ಗಲ್ರಾನಿ ನ್ಯಾಯಂಗ ಬಂಧನದ ಅವಧಿ ಅ.23ರವರೆಗೆ ವಿಸ್ತರಣೆಯಾಗಿದೆ. ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ನಟಿಯರಾದ ರಾಗಿಣಿ, ಸಂಜನಾ ಗಲ್ರಾನಿ ಅವರನ್ನು ತನಿಖೆಗಾಗಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಈ ಇಬ್ಬರು ನಟಿಯರು ಜಾಮೀನಿಗಾಗಿ ಹಲವು ಬಾರಿ ಪ್ರಯತ್ನಿಸಿದ್ದರೂ, ಅದಕ್ಕೆ ಅವಕಾಶ ದೊರೆತ್ತಿಲ್ಲ. ಎನ್ ಡಿಪಿಎಸ್ ವಿಶೇಷ ನ್ಯಾಯಾಲಯವು ಇದೀಗ ಅ.23ರವರೆಗೆ ವಿಸ್ತರಿಸಿ ಆದೇಶ ನೀಡಿದೆ. : ------