ಸಂಕಷ್ಟದಲ್ಲಿದ್ದ ದಂಪತಿ ಮೊಗದಲ್ಲೀಗ ಸಂತಸ: ಸೋಷಿಯಲ್ ಮೀಡಿಯಾದ ತಾಖತ್ ಗೆ ಸಾಕ್ಷಿಯಾಯ್ತು “ಬಾಬಾ ಕಾ ಧಾಬಾ” ನವದೆಹಲಿ,ಅಕ್ಟೋಬರ್,8,2020(..):ದಕ್ಷಿಣ ದಿಲ್ಲಿಯ ಮಾಲವಿಯಾ ನಗರ್ ಪ್ರದೇಶದ ರಸ್ತೆ ಬದಿಯ “ಬಾಬಾ ಕಾ ಧಾಬಾ” ಸೋಷಿಯಲ್ ಮೀಡಿಯಾದ ತಾಖತ್ ಗೆ ಸಾಕ್ಷಿಯಾಗಿದೆ. ಈ ಧಾಬಾ ನಡೆಸುವ ಹಿರಿಯ ದಂಪತಿಯ ಮೊಗದಲ್ಲಿ ಈಗ ಸಂತಸ ಮನೆ ಮಾಡಿದೆ. ಅದಕ್ಕೆ ಕಾರಣ ಕುತೂಹಲಕಾರಿ. ಈ ಧಾಬಾ ನಡೆಸುವ 80 ವರ್ಷದ ಕಾಂತಾ ಪ್ರಸಾದ್ ಮತ್ತವರ ಪತ್ನಿ ಬಾದಾಮಿ ದೇವಿ ಕೆಲದಿನಗಳಿಂದ ವ್ಯಾಪಾರವಿಲ್ಲದೆ ಜೀವನ ನಡೆಸಲು ಹರಸಾಹಸ ಪಡುತ್ತಿದ್ದರು. ಬ್ಲಾಗರ್ ಒಬ್ಬರು ಈ ಬಗ್ಗೆ ವಿಡಿಯೋ ಸಮೇತ ಪೋಸ್ಟ್ ಮಾಡಿ ನೆರವಿಗೆ ಮನವಿ ಮಾಡಿದ್ದರು. ಇದಾದ ಕೆಲವೇ ಕೆಲ ಹೊತ್ತಿನಲ್ಲಿ ಧಾಬಾಗೆ ಜನಸಾಗರವೇ ಹರಿದು ಬಂತು. ಜತೆಗೆ ಸೆಲೆಬ್ರಿಟಿಗಳು ಹಾಗೂ ಕ್ರಿಕೆಟಿಗರು ಈ ವೃದ್ಧ ದಂಪತಿ ಸಹಾಯಕ್ಕೆ ಮುಂದಾದರು.ಈಗ ದಂಪತಿ ಮೊಗದಲ್ಲಿ ನಗು ಅರಳಿದೆ. : “ - –- -