ಕೋವಿಡ್ ಸಂದರ್ಭ ದಸರಾ ಆಚರಣೆ ಹಿನ್ನೆಲೆ: ನಾಳೆ ಮೈಸೂರಿಗೆ ರಾಜ್ಯದ ಮಟ್ಟದ ತಾಂತ್ರಿಕ ಸಲಹಾ ಸಮಿತಿ… ಮೈಸೂರು,ಅಕ್ಟೋಬರ್,8,2020(..): ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಬ್ಬರಿಸುತ್ತಿದ್ದು ಕೋವಿಡ್ ಸಂದರ್ಭದಲ್ಲಿ ದಸರಾ ಆಚರಣೆಗೆ ಮುಂದಾಗಿದ್ದು ಈಹಿನ್ನೆಲೆ ಪರಿಶೀಲನೆ ನಡೆಸಲು ನಾಳೆ ಮೈಸೂರಿಗೆ ರಾಜ್ಯದ ಮಟ್ಟದ ತಾಂತ್ರಿಕ ಸಲಹಾ ಸಮಿತಿ ಆಗಮಿಸಲಿದೆ. ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ ಸುದರ್ಶನ ನೇತೃತ್ವದ ತಂಡ ನಾಳೆ ಮೈಸೂರಿಗೆ ಆಗಮಿಸಲಿದ್ದು, ದಸರಾ ಆಚರಣೆಯ ಪೂರ್ವಭಾವಿ ಸಿದ್ದತೆ ಹಾಗೂ ಕೋವಿಡ್ ಹರಡದಂತೆ ಮುಂಜಾಗ್ರತಾ ಕ್ರಮಗಳ ಪರಿಶೀಲನೆ ನಡೆಸಲಿದೆ. ಪರಿಶೀಲನೆ ಬಳಿಕ ಅಗತ್ಯ ಸಲಹೆ ಸೂಚನೆಗಳೊಂದಿಗೆ ರಾಜ್ಯ ಸರ್ಕಾರಕ್ಕೆ ತಾಂತ್ರಿಕ ಸಮಿತಿ ವರದಿ ನೀಡಲಿದೆ. ತಾಂತ್ರಿಕ ಸಮಿತಿ ತಂಡಕ್ಕೆ ಮಾಹಿತಿ ನೀಡಲು ಜಿಲ್ಲಾಡಳಿತ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೇಮಿಸಿದೆ. ಉಪವಿಭಾಗದಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಅರಮನೆ ಮಂಡಳಿಯ ಉಪನಿರ್ದೇಶಕ ಹಾಗೂ ಅರಮನೆ ಭದ್ರತೆ ಪಡೆಯ ಸಹಾಯಕ ಪೋಲೀಸ್ ಆಯುಕ್ತರನ್ನ ನೇಮಕ ಮಾಡಲಾಗಿದೆ. ಈ ಅಧಿಕಾರಿಗಳು ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿಗೆ ಸೂಕ್ತ ಮಾಹಿತಿ ನೀಡಲಿದ್ದಾರೆ. : -19- - - – - .