ಬೆಂಗಳೂರಿನಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ… ಬೆಂಗಳೂರು,ಅಕ್ಟೋಬರ್,8,2020(..):ಬೆಂಗಳೂರಿನಲ್ಲಿ ಇಬ್ಬರು ಶಂಕಿತ ಉಗ್ರರನ್ನ ಎನ್ ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಇರ್ಫಾನ್ ನಸೀರ್(33), ತಮಿಳುನಾಡು ಮೂಲದ ಅಹ್ಮದ್ ಅಬ್ದುಲ್(40) ಬಂಧಿತ ಶಂಕಿತ ಉಗ್ರರು. ಬಂಧಿತ ಇರ್ಫಾನ್ ನಾಸೀರ್ ಫ್ರೆಜರ್ ಟೌನ್ ಗುರಪ್ಪನಪಾಳ್ಯದಲ್ಲಿ ವಾಸಮಾಡುತ್ತಿದ್ದು ಅಕ್ಕಿ ಮಾರಾಟ ಮಾಡುತ್ತಿದ್ದನು. ಈ ನಡುವೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನ ಬಂಧಿಸಿದ್ದಾರೆ. ಬಂಧಿತ ಇಬ್ಬರು ಐಸಿಸಿ ಉಗ್ರ ಚಟುವಟಿಕೆಯನ್ನ ನಡೆಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಶಂಕಿತ ಉಗ್ರರಿಬ್ಬರನ್ನು ಎನ್ ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ಎನ್ ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಶಂಕಿತರ ಬಳಿ ಇದ್ದ ಎಲೆಕ್ಟ್ರಾನಿಕ್ ಡಿವೈಸ್ ಹಾಗೂ ಟೆಕ್ನಿಕಲ್ ಸಾಕ್ಷ್ಯಗಳನ್ನ ಎನ್ ಐಎ ಅಧಿಕಾರಿಗಳು ಸೀಜ್ ಮಾಡಿದ್ದಾರೆ ಎನ್ನಲಾಗಿದೆ. : - –- -