ಡಿ.ಕೆ ರವಿ ಅವರ ಹೆಸರಿಗೆ ಕಳಂಕ ತರಲ್ಲ- ಆರ್. ಆರ್ ನಗರ ‘ಕೈ’ ಅಭ್ಯರ್ಥಿ ಕುಸುಮಾ… ಬೆಂಗಳೂರು, ಅಕ್ಟೋಬರ್,8,2020(..):ಆರ್ ಆರ್ ನಗರ ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಐಎಎಸ್ ಅಧಿಕಾರಿ ದಿ. ಡಿ.ಕೆ ರವಿ ಅವರ ಪತ್ನಿ ಕುಸುಮಾ ಅವರು ಕಣಕ್ಕಿಳಿದಿದ್ದಾರೆ. ಈ ಮಧ್ಯೆ ರಾಜಕೀಯಕ್ಕೆ ಬಂದ ವಿಚಾರ ಮತ್ತು ಅತ್ತೆ ಗೌರಮ್ಮ ನೀಡಿದ್ದ ಹೇಳಿಕೆ ಕುರಿತು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಪ್ರತಿಕ್ರಿಯಿಸಿದ್ದಾರೆ. ನಾನು ಡಿ.ಕೆ ರವಿ ಅವರ ಹೆಸರಿಗೆ ಕಳಂಕ ತರಲ್ಲ. ಮೊದಲಿನಿಂದಲೂ ನಾನು ರಾಜಕೀಯ ನೋಡಿಕೊಂಡು ಬಂದಿದ್ದೇನೆ. ಯುವಕರು, ವಿದ್ಯಾವಂತರು ರಾಜಕೀಯಕ್ಕೆ ಬರಬೇಕು. ಹೀಗಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ತಿಳಿಸಿದ್ದಾರೆ. ಈ ನಡುವೆ ಅತ್ತ ಗೌರಮ್ಮ ನೀಡಿದ್ದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕುಸುಮಾ ಅವರು, ಮೊದಲಿನಿಂದಲೂ ಅವರು ಹೀಗೆ ಹೇಳುತ್ತಲೇ ಬಂದಿದ್ದಾರೆ. ನನ್ನ ಅತ್ತೆ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ. ಇತ್ತೀಚೆಗೆ ಸೊಸೆ ಕುಸುಮಾ ವಿರುದ್ದ ಆಕ್ರೋಶ ಹೊರಹಾಕಿದ್ದ ಡಿ.ಕೆ.ರವಿ ಅವರ ತಾಯಿ ಗೌರಮ್ಮ, ‘ನನ್ನ‌ ಮಗನ ಹೆಸರು ಮತ್ತು ಫೋಟೋ ಹಾಕಿಕೊಂಡು ಚುನಾವಣೆಗೆ ನಿಲ್ಲಬಾರದು. ಅಪ್ಪಿತಪ್ಪಿ ನನ್ನ ಮಗನ ಫೋಟೋ ಬಳಸಿದರೆ ಪ್ರಚಾರ ಪತ್ರಗಳಿಗೆ ಬೆಂಕಿ‌ ಹಚ್ಚಿಸ್ತೀನಿ’ ಎಂದು ಕಿಡಿಕಾರಿದ್ದರು. : ’- – - . --- -.