ಜೆಡಿಎಸ್ ಪಕ್ಷ ಎಲ್ಲಿದೆ: ಅದಕ್ಕೆ ಮುಕ್ತಿ ನೀಡಿ ಆಗಿದೆ-ಹೆಚ್ ಡಿಕೆ ಕಾಲೆಳೆದ ಡಿ.ಕೆ ಶಿವಕುಮಾರ್ ಬೆಂಗಳೂರು,ಏಪ್ರಿಲ್,11,2024 (..):ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಕಾಂಗ್ರೆಸ್ ನಾಯಕರು ಟೀಕಿಸುತ್ತಲೇ ಇದ್ದು ಇದೀಗ ಜೆಡಿಎಸ್ ಅಸ್ತಿತ್ವ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಜೆಡಿಎಸ್ ಪಕ್ಷ ಎಲ್ಲಿದೆ . ಅದಕ್ಕೆ ಮುಕ್ತಿ ನೀಡಿ ಆಗಿದೆ. ಜೆಡಿಎಸ್ ಇರಲಿ. ಜೆಡಿಎಸ್ ಇರಲಿ ಇರಬೇಕು ಅಂತ ಈಗಲೂ ಆಸೆ ಇದೆ. ಆದರೆ ಅವರು ಜೆಡಿಎಸ್ ವಿಸರ್ಜನೆ ಮಾಡುವ ಸ್ಟೇಜ್ ನಲ್ಲಿದ್ದಾರೆ ಎಂದು ಹೆಚ್.ಡಿಕೆ ಕಾಲೆಳೆದರು. ಹಾಗೆಯೇ ಅಳಿಯನನ್ನೇ ಬಿಜೆಪಿಗೆ ಕಳುಹಿಸಿದ ಮೇಲೆ ಇನ್ನೆಲ್ಲಿ ಪಕ್ಷ ಉಳಿಯುತ್ತೆ ಎಂದು ಡಿಕೆ ಶಿವಕುಮಾರ್ ಲೇವಡಿ ಮಾಡಿದರು. : , ,