ತಾಕತ್ತಿದ್ರೆ ನಿಮ್ಮ ಮುಂದಿನ ಸಿಎಂ, ಮುಂದಿನ ಪಿಎಂ ಯಾರೇಂದು ಹೇಳಿ-ಬಿಎಸ್ ವೈಗೆ ಲಕ್ಷ್ಮಣ್ ಸವದಿ ಸವಾಲು. ಬೆಂಗಳೂರು,ಏಪ್ರಿಲ್,11,2024 (..):ತಾಕತ್ತಿದ್ರೆ ಕಾಂಗ್ರೆಸ್ ತಮ್ಮ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಿಸಲಿ ಎಂದು ಹೇಳಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಸವಾಲು ಹಾಕಿದ್ದಾರೆ. ಈ ಕುರಿತು ಮಾತನಾಡಿರುವ ಲಕ್ಷ್ಮಣ್ ಸವದಿ, ನಿಮಗೆ ತಾಕತ್ ಇದ್ರೆ ರಾಜ್ಯದ ನಿಮ್ಮ ಮುಂದಿನ ಸಿಎಂ ಅಭ್ಯರ್ಥಿ ಯಾರೆಂದು ಹೇಳಿ, ಮೋದಿ ನಂತರ ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರೆಂದು ಬಹಿರಂಗಪಡಿಸಿ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪಗೆ ಸವಾಲ್ ಹಾಕಿದ್ದಾರೆ. ಈ ವಯಸ್ಸಿನಲ್ಲಿ ಸವಾಲ್ ಹಾಕಿದ್ದೀರಾ..? ನಿಮಗೆ ತಾಕತ್ ಇದ್ರೆ ರಾಜ್ಯದ ಮುಂದಿನ ಸಿಎಂ ಯಾರೆಂದು ಹೇಳಿ..? ತಾಕತ್ ಇದ್ರೆ ಮೋದಿ ಬಳಿಕ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಿ..? ಬೇರೆ ಪಕ್ಷದವರನ್ನು ಕೇಳುವ ನೈತಿಕತೆ ನಿಮಗಿಲ್ಲ ಎಂದು ಶಾಸಕ ಲಕ್ಷ್ಮಣ್ ಸವದಿ ಟಾಂಗ್ ಕೊಟ್ಟಿದ್ದಾರೆ. : , ,