ಡಿಕೆ ಶಿವಕುಮಾರ್ ತಪ್ಪು ಮಾಡಿಲ್ಲ ಅಂದ್ರೆ ಹೆದರುವ ಅಗತ್ಯವಿಲ್ಲ – ಸಚಿವ ಜಗದೀಶ್ ಶೆಟ್ಟರ್… ಹುಬ್ಬಳ್ಳಿ,ಅಕ್ಟೋಬರ್,6,2020(..):ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ , ಡಿಕೆ ಶಿವಕುಮಾರ್ ತಪ್ಪು ಮಾಡಿಲ್ಲ ಅಂದ್ರೆ ಹೆದರುವ ಅಗತ್ಯವಿಲ್ಲ. ಡಿಕೆಶಿ ಬೇಕಾದ್ರೆ ಕಾನೂನು ಹೋರಾಟ ಮಾಡಲಿ ಎಂದರು. ಇಂದು ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಸಿಬಿಐ ಸುಮ್ಮನೆ ದಾಳಿ ಮಾಡಲ್ಲ. ದಾಖಲೆ ಕಲೆಹಾಕಿ ಪೂರ್ವ ಸಿದ್ಧತೆಯೊಂದಿಗೆ ದಾಳಿ ಮಾಡುತ್ತದೆ. ಡಿ.ಕೆ ಶಿವಕುಮಾರ್ ತಪ್ಪು ಮಾಡಿಲ್ಲ ಎಂದರೇ ಹೆದರುವ ಅವಶ್ಯಕತೆ ಇಲ್ಲ. ಲೆಕ್ಕಪತ್ರ ಸರಿಯಾಗಿದ್ದರೇ ಹೆದರಬೇಕಿಲ್ಲ ಎಂದು ತಿಳಿಸಿದರು. ಹಾಗೆಯೇ ಡಿ.ಕೆ ಶಿವಕುಮಾರ್ ತಮ್ಮ ಸಂಪಾದನೆಗೆ ಸಂಬಂಧಿಸಿದ ದಾಖಲೆಗಳನ್ನೆಲ್ಲಾ ನೀಡಲಿ. ತಪ್ಪಿಲ್ಲದಿದ್ದರೇ ಆರೋಪದಿಂದ ಮುಕ್ತರಾಗಿ ಹೊರಬರಲಿ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು. : - - – - - .