ಸಿಬಿಐ ದಾಳಿ: ಈ ರೀತಿ ಬೆದರಿಕೆಯಿಂದ ಡಿ.ಕೆ ಶಿವಕುಮಾರ್ ಗೆ ಏನು ಆಗಲ್ಲ-ಸಂಸದ ಡಿ.ಕೆ ಸುರೇಶ್… ಬೆಂಗಳೂರು,ಅಕ್ಟೋಬರ್,5,2020(..): ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿವಾಸದ ಮೇಲಿನ ಸಿಬಿಐ ದಾಳಿ ಸಂಬಂಧ ಈ ರೀತಿಯ ಬೆದರಿಕೆಯಿಂದ ಡಿ.ಕೆ ಶಿವಕುಮಾರ್ ಗೆ ಏನು ಆಗಲ್ಲ ಎಂದು ಸಂಸದ ಡಿ.ಕೆ ಸುರೇಶ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಂಸದ ಡಿ.ಕೆ ಸುರೇಶ್, ಕಾಂಗ್ರೆಸ್ ಪಕ್ಷವನ್ನು ಹತ್ತಿಕ್ಕಲು ಈ ರೀತಿ ದಾಳಿಯಾಗಿದೆ. ಇದು ರಾಜಕೀಯ ಪ್ರೇರಿತ ದಾಳಿ. ಬೆದರಿಕೆ ಏನಿದ್ರೂ ಹೆದರಿ ಓಡಿ ಹೋಗುವವರಿಗೆ. ಅವರ ಬೆದರಿಕೆಗೆ ನಾವು ಹೆದರುವುದಿಲ್ಲ. ಇದರಿಂದ ಈ ರೀತಿ ಬೆದರಿಕೆಯಿಂದ ಡಿ.ಕೆ ಶಿವಕುಮಾರ್ ಗೆ ಏನು ಆಗಲ್ಲ ಎಂದರು. ಹಾಗೆಯೇ ಪಕ್ಷಕ್ಕೆ ಕಾರ್ಯಕರ್ತರಿಗೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇವೆ. ಚುನಾವಣಾ ಪ್ರಚಾರಕ್ಕೆ ಹೋಗದಂತೆ ತಡೆಯುವ ಪ್ರಯತ್ನ ಇದು. ಆದರೆ ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡುವ ಪ್ರಶ್ನೆಯೇ ಇಲ್ಲ ಎಂದು ಡಿ.ಕೆ ಸುರೇಶ್ ತಿಳಿಸಿದರು. : - – -, -