ನಮಗೆ ಎರಡು ವಾರ ಸಮಯ ಕೊಡಿ: ಮೈಸೂರಿನಲ್ಲಿ ಕೊರೋನಾ ನಿಯಂತ್ರಿಸುತ್ತೇವೆ- ಕಾಲಾವಕಾಶ ಕೇಳಿದ ಡಿಸಿ ರೋಹಿಣಿ ಸಿಂಧೂರಿ… ಮೈಸೂರು,ಅಕ್ಟೋಬರ್,5,2020(..):ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಮಹಾಮಾರಿ ದಿನೇ ದಿನೇ ಹೆಚ್ಚುತ್ತಿದ್ದು ಈ ಹಿನ್ನೆಲೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಕೋವಿಡ್ ನಿಯಂತ್ರಿಣಕ್ಕೆ ಎರಡು ವಾರಗಳ ಕಾಲಾವಕಾಶ ಕೇಳಿದ್ದಾರೆ. ಕೊರೊನಾ‌ ನಿಯಂತ್ರಣ ಸಂಬಂಧ ಇಂದು ಮೈಸೂರಿನಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ನೇತೃತ್ವದಲ್ಲಿ ಸಭೆ ನಡೆಯಿತು. ಈ ವೇಳೆ ಮೈಸೂರಿನಲ್ಲಿ ಕೊರೋನಾ ನಿಯಂತ್ರಣ ತರಲು ಎರಡು ವಾರ ಕಾಲಾವಕಾಶ ಕೊಡಿ ಎಂದು ಮೈಸೂರು ಡಿಸಿ ರೋಹಿಣಿ ಸಿಂಧೂರಿ ಸಚಿವ ಸುಧಾಕರ್ ಬಳಿ ಮನವಿ ಮಾಡಿದರು. . ನಮಗೆ ಎರಡು ವಾರ ಸಮಯ ಕೊಡಿ. ಮೈಸೂರಿನಲ್ಲಿ ಕೊರೊನಾ ನಿಯಂತ್ರಣ ತರುತ್ತೇವೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಾಲಾವಕಾಶ ಕೇಳಿದರು. ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಡಾ.ಕೆ ಸುಧಾಕರ್, ಜಿಲ್ಲಾಧಿಕಾರಿಗಳು ಬಹಳ ವಿಶ್ವಾಸದಿಂದ ಎರಡು ವಾರಗಳ ಕಾಲ ಕಾಲಾವಕಾಶ ಕೇಳಿದ್ದಾರೆ, ನಾವು ಕೊಟ್ಟಿದ್ದೇವೆ ಎಂದರು. : - - – –- – -